ಕರ್ನಾಟಕ ಬಂದ್: ಹುಬ್ಬಳ್ಳಿಯಲ್ಲಿ ಟುಸ್ ಪಟಾಕಿ: ಕನ್ನಡಪರ ಸಂಘಟನೆಗಳಲ್ಲೇ ಒಡಕು

ಹುಬ್ಬಳ್ಳಿ: ಖಾಸಗಿ ಮತ್ತು ಸರಕಾರಿ ಉದ್ಯೋಗಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವಂತೆ ಡಾ.ಸರೋಜಿನಿ ಮಹಷಿ ಸಲ್ಲಿಸಿರುವ ವರದಿಯನ್ನ ಜಾರಿಗೆ ತರಬೇಕೆಂದು ಆಗ್ರಹಿಸಿ ಕೆಲವು ಕನ್ನಡಪರ ಸಂಘಟನೆಗಳು ಕರೆದಿದ್ದ ಕರ್ನಾಟಕ ಬಂದ್ ಹುಬ್ಬಳ್ಳಿಯಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ.
ಸಂಘಟನೆಗಳ ಮುಖಂಡರು ರಾಜ್ಯವ್ಯಾಪಿ ಹೋರಾಟ ನಡೆಯತ್ತೆ ಮತ್ತು 600 ಸಂಘಟನೆಗಳು ಬೆಂಬಲ ನೀಡಿವೆ ಎಂದಿದ್ದರು. ಆದರೆ, ಆ ಥರದ ಬೆಂಬಲ ವಾಣಿಜ್ಯನಗರಿಯಲ್ಲಿ ಕಂಡು ಬರಲೇ ಇಲ್ಲ. ಎಂದಿನಂತೆ ಬಸ್ ಸಂಚಾರ, ಆಟೋ, ಕ್ಯಾಬ್ ಸಂಚಾರ ನಡೆದಿತ್ತು. ಅಂಗಡಿಮುಗ್ಗಟ್ಟುಗಳು ಕೂಡಾ ದಿನನಿತ್ಯದಂತೆ ವ್ಯವಹರಿಸುತ್ತಿದ್ದವು.
ಜಿಲ್ಲಾಧಿಕಾರಿ ದೀಪಾ ಜೋಳನ ನಿನ್ನೆಯ ಶಾಲೆ-ಕಾಲೇಜು ರಜೆಯಿಲ್ಲ ಎಂದು ಘೋಷಣೆ ಮಾಡಿದ್ದರಿಂದ ಯಾವುದೇ ತೊಂದರೆಯಿಲ್ಲದೇ ಶಿಕ್ಷಣ ಸಂಸ್ಥೆಗಳು ಆರಂಭಗೊಂಡಿದ್ದವು.