ಡಾ.ಪಾಪು ಆರೋಗ್ಯದಲ್ಲಿ ಏರುಪೇರು: ಶತಾಯುಷಿಗೆ ಕಿಮ್ಸ್ ನಲ್ಲಿ ಚಿಕಿತ್ಸೆ

ಹುಬ್ಬಳ್ಳಿ: ಹಿರಿಯ ಪತ್ರಕರ್ತ ನಾಡೋಜ ಡಾ.ಪಾಟೀಲ ಪುಟ್ಟಪ್ಪ ಆರೋಗ್ಯದಲ್ಲಿ ಏರುಪೇರಾಗಿದ್ದು ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಕಳೆದ ಐದಾರು ದಿನದಿಂದ ಕೆಮ್ಮು ಮತ್ತು ಕಫದಿಂದ ಬಳಲುತ್ತಿದ್ದ ನಾಡೋಜ ಪಾಟೀಲ ಪುಟ್ಟಪ್ಪನವರಿಗೆ, ಇದರಿಂದ ಇನಫೆಕ್ಷನ್ ಆಗಿರುವ ಸಾಧ್ಯತೆಯಿದ್ದು, ತೀವ್ರವಾಗಿ ಬಳಲಿದ್ದಾರೆ. ಕಿಮ್ಸ್ ನ ವಿಶೇಷ ವಾರ್ಡನಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಆರೋಗ್ಯದಲ್ಲಿ ಸುಧಾರಣೆಯಾಗುತ್ತಿದೆ.