ಕೋರ್ಟ್ ಮುಚ್ಚಬೇಕೆ: ಕೇಂದ್ರದ ವಿರುದ್ಧ ಹರಿಹಾಯ್ದ ಸುಪ್ರೀಂ

ನವದೆಹಲಿ: ಬಾಕಿ ಹಣವನ್ನ ಪಾವತಿಸುವಂತೆ ಸುಪ್ರೀಂಕೋರ್ಟ್ ಆದೇಶ ನೀಡಿದ್ದರೂ, ಕಂಪನಿಗಳ ವಿರುದ್ಧ ಕ್ರಮ ತೆಗೆದುಕೊಳ್ಳದೇ ಕೋರ್ಟ್ ಆದೇಶವನ್ನೇ ತಡೆ ಹಿಡಿದಿದ್ದ ಟೆಲಿಕಾಂ ಇಲಾಖೆಯನ್ನ ಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಈ ಬಗ್ಗೆ ನ್ಯಾಯಮೂರ್ತಿ ಅರುಣ ಮಿಶ್ರಾ ಕಿಡಿಕಾರಿ ಕೋರ್ಟ ಮುಚ್ಚಬೇಕೆ..? ಕೋರ್ಟ ಆದೇಶ ಪ್ರಶ್ನಿಸುವ ಉದ್ಧಟತನವಿದು ಎಂದು ಆಕ್ರೋಶವ್ಯಕ್ತಪಡಿಸಿದರು.