ಕುಸ್ತಿ ಪಂದ್ಯಾವಳಿ: ಅಮೃತ ದೇಸಾಯಿ ಸ್ವಂತದ್ದಲ್ಲ: ಬಸವರಾಜ ಹೊರಟ್ಟಿ ಕಿಡಿ

ಹುಬ್ಬಳ್ಳಿ: ಸರಕಾರದ ಕಾರ್ಯಕ್ರಮಗಳನ್ನ ತಮ್ಮ ಪಕ್ಷದ ಕಾರ್ಯಕ್ರಮವೆನ್ನುವ ರೀತಿಯಲ್ಲಿ ಬಿಜೆಪಿಯವರು ನಡೆದುಕೊಳ್ಳುತ್ತಿದ್ದಾರೆ. ಧಾರವಾಡ ಗ್ರಾಮೀಣ ಶಾಸಕ ಅಮೃತ ದೇಸಾಯಿ ಕೂಡಾ ಕುಸ್ತಿ ಪಂದ್ಯಾವಳಿಯನ್ನ ಸ್ವಂತ ಖರ್ಚಿನಿಂದ ಮಾಡುತ್ತಿದ್ದಾರೇನೋ ಎಂಬ ರೀತಿಯಲ್ಲಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಬೇಸರವ್ಯಕ್ತಪಡಿಸಿದ್ರು.
ಧಾರವಾಡದಲ್ಲಿ ಆಯೋಜನೆಗೊಂಡಿರುವ ಕುಸ್ತಿ ಪಂದ್ಯಾವಳಿ ಬಗ್ಗೆ ಏನೂ ಗಮನಕ್ಕೆಯಿಲ್ಲ. ಜಿಲ್ಲಾಧಿಕಾರಿ ಕೂಡಾ ಬಿಜೆಪಿ ಪಕ್ಷದ ಕಾರ್ಯಕರ್ತರಂತೆ ವರ್ತಿಸುತ್ತಿದ್ದಾರೆಂದು ಹಿರಿಯ ರಾಜಕಾರಣಿ ಬೇಸರಿಸಿದ್ದಾರೆ.