ಮೂರುಸಾವಿರ ಮಠ: ನನಗಿನ್ನು ದೈಹಿಕ,ಭೌದಿಕ ಶಕ್ತಿಯಿದೆ: ಶ್ರೀಗಳ ಪ್ರಕಟಣೆ

ಹುಬ್ಬಳ್ಳಿ: ಮೂರುಸಾವಿರ ಮಠದ ಉತ್ತರಾಧಿಕಾರಿ ನೇಮಕದ ಬಗ್ಗೆ ಭಕ್ತರಲ್ಲಿ ಗೊಂದಲ ಬೇಡಾ. ನಾನಿನ್ನೂ ದೈಹಿಕವಾಗಿ ಭೌದಿಕವಾಗಿ ಕ್ಷೇಮವಾಗಿದ್ದಾನೆ ಎಂದು ಶ್ರೀ ಗುರುಶಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಉತ್ತರಾಧಿಕಾರಿ ನೇಮಕದ ಸಂಬಂಧ ಕೆಲವರು ಸಭೆ ನಡೆಸುವುದು, ಹೇಳಿಕೆ ಕೊಡುವುದರ ಬಗ್ಗೆ ಪ್ರಸ್ತಾಪಿಸಿರುವ ಶ್ರೀಗಳು, ಉತ್ತರಾಧಿಕಾರಿ ವಿಷಯ ನ್ಯಾಯಾಲಯದಲ್ಲಿದೆ. ಅದರ ತೀರ್ಪು ಬಂದ ನಂತರ ಕಾನೂನಿನ ಪ್ರಕಾರ ಮಠದ ಸಂಪ್ರದಾಯದಂತೆ ನೇಮಕವಾಗತ್ತೆ ಎಂದಿದ್ದಾರೆ.