ಪೌರತ್ವಕ್ಕೆ ವೋಟರ್ ಐಡಿ ಅಧಿಕೃತ ದಾಖಲೆ: ನ್ಯಾಯಾಲಯ ತೀರ್ಪು

ನವದೆಹಲಿ: ಮೂಲ ಚುನಾವಣಾ ಕಾರ್ಡಗಳು ಪೌರತ್ವಕ್ಕೆ ಪಶ್ನಾತೀತ ಪುರಾವೆಯಾಗಿದೆ ಎಂದು ಮಾಜಿಸ್ಟ್ರೇಟ್ ನ್ಯಾಯಾಲಯ ಹೇಳಿದೆ.
ಭಾರತದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ಬಾಂಗ್ಲಾದೇಶದ ಪ್ರಜೆಗಳು ಎಂಬಅನುಮಾನದ ಮೇಲೆ 2017ರಲ್ಲಿ ಬಂಧಿಸಲ್ಪಟ್ಟ ಮನಖುರ್ಡ ದಂಪತಿಗಳನ್ನ ಖುಲಾಸೆಗೊಳಿಸುವಾಗ ಈ ಆದೇಶ ಹೊರಡಿಸಲಾಗಿದೆ. ಇದೇ ವೇಳೆ ಆದಾರ ಕಾರ್ಡ, ಚಾಲನಾ ಪರವಾನಿಗೆ ಪತ್ರ ಮತ್ತು ಪ್ಯಾನ್ ಕಾರ್ಡ್ ಅಥವಾ ಪಡಿತರ ಚೀಟಿ ಪೌರತ್ವವನ್ನ ಸಾಭೀತುಪಡಿಸುವ ದಾಖಲೆಗಳೆಂದು ಹೇಳಲಾಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.