ಟ್ರಂಪ್ ಆಗಮನ: ನಿಮಿಷಕ್ಕೆ 55ಲಕ್ಷ ರೂಪಾಯಿ ಖರ್ಚು: ಕಾಸ್ಟ್ಲಿ ಅತಿಥಿ

ಅಹಮದಾಬಾದ: ಮುಂದಿನ ವಾರ ಭಾರತಕ್ಕೆ ಪ್ರವಾಸ ಕೈಗೊಂಡಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಒಂದು ನಿಮಿಷದ ಖರ್ಚು ಬರೋಬ್ಬರಿ 55ಲಕ್ಷ ರೂಪಾಯಿ ಆಗಲಿದೆ. ಬಹುತೇಕ 3ಗಂಟೆಯ ಕಾರ್ಯಕ್ರಮಕ್ಕೆ 100 ಕೋಟಿ ರೂಪಾಯಿ ಖರ್ಚಾಗಲಿದೆ.
ಫೆ.24 ಮತ್ತು 25ರಂದು ಭಾರತಕ್ಕೆ ಎರಡು ದಿನಗಳ ಪ್ರವಾಸ ಕೈಗೊಳ್ಳಲ್ಲಿದ್ದಾರೆ. ಗುಜರಾತನಲ್ಲಿ ಫೆ.24ರಂದು 3ಗಂಟೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಇದಕ್ಕಾಗಿ ಕೆಂಪು ಹಾಸಿನ ಸ್ವಾಗತ ನೀಡಲು ಸರಕಾರ ಹಲವು ಕಾಮಗಾರಿಗಳನ್ನ ಕೈಗೊಂಡಿದೆ. ಇದರ ವೆಚ್ಚ ಬರೋಬ್ಬರಿ 100 ಕೋಟಿ ದಾಟಲಿದೆ.