ಹುಬ್ಬಳ್ಳಿಯಲ್ಲಿ ಮತ್ತೆ ಸರಗಳ್ಳತನ: ಹಾಡುಹಗಲೇ ಘಟನೆ

ಹುಬ್ಬಳ್ಳಿ: ಸಂಬಂಧಿಕರ ಮನೆಗೆ ಮದುವೆ ಆಮಂತ್ರಣ ಕೊಡಲು ಹೋಗುತ್ತಿದ್ದಾಗ ಮಹಿಳೆಯೋರ್ವರ ಮಾಂಗಲ್ಯ ಸರವನ್ನ ಕಿತ್ತುಕೊಂಡು ಹೋದ ಘಟನೆ ಕಾಳಿದಾಸನಗರ ಶ್ರೀನಿವಾಸ ಹೈಟ್ಸ್ ಅಪಾರ್ಟ್ ಮೆಂಟ್ ಹತ್ತಿರ ಸಂಭವಿಸಿದೆ.
ಅರ್ಜುನ ವಿಹಾರ ನಿವಾಸಿಯಾದ ಸರಸ್ವತಿ ಹೆಗಡೆ ಅವರು ತಮ್ಮನ ಪತ್ನಿಯೊಂದಿಗೆ ರಾಜೀವಗಾಂಧಿ ನಗರಕ್ಕೆ ಹೋಗುವಾಗ 22ರಿಂದ 24ವಯಸ್ಸಿನ ಇಬ್ಬರು ಯುವಕರು ಬಲವಂತವಾಗಿ 75 ಸಾವಿರ ಮೌಲ್ಯದ ಮಾಂಗಲ್ಯಸರವನ್ನ ಕಿತ್ತುಕೊಂಡು ಪರಾರಿಯಾಗಿದ್ದಾರೆ. ವಿದ್ಯಾನಗರ ಠಾಣೆ ಪೊಲೀಸರು ಪ್ರಕರಣ ದಾಖಲುಕೊಂಡು ತನಿಖೆ ಕೈಗೊಂಡಿದ್ದಾರೆ.