ಉಂಗುರು ಕದ್ದವನಿಗೆ 2ವರ್ಷ ಶಿಕ್ಷೆ: ಮೂರು ವರ್ಷದ ಪ್ರಕರಣ

ಹುಬ್ಬಳ್ಳಿ: ಮನೆಯ ಒಳಗೆ ಹೋಗಿ ಬಂಗಾರ ಉಂಗುರ ಕದ್ದು ಪರಾರಿಯಾಗಿದ್ದ ಕಳ್ಳನಿಗೆ ಇಲ್ಲಿನ 1ನೇ ಜೆಎಂಎಫ್ ಸಿ ನ್ಯಾಯಾಲಯ ಎರಡು ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 5ಸಾವಿರ ದಂಡ ವಿಧಿಸಿದೆ.
ಮಂಟೂರ ರಸ್ತೆಯ ಹ್ಯೂಜನ್ ಚರ್ಚ್ ಹತ್ತಿರದ ಆಟೋ ಚಾಲಕ ಇರ್ಫಾನ ಬಿಜಾಪೂರ ಶಿಕ್ಷೆಗೆ ಒಳಪಟ್ಟವರು. ವಿಜಯನಗರದ ನಿವಾಸಿ ವಿಭಾ ಪ್ರಭು ಎಂಬುವವರ ಮನೆಯೊಳಗೆ ಹೋಗಿ ಕಳ್ಳತನ ಮಾಡಿದ್ದ. ಪ್ರಕರಣ 2016.ಜೂನ್ 17ರಂದು ನಡೆದಿತ್ತು.