ಕುಡಿಯಲು ಹಣ ನೀಡದ ಮಗಳನ್ನೇ ಕೊಲೆ ಮಾಡಿದ ಪಾಪಿ ತಂದೆ

ಬಳ್ಳಾರಿ: ಪ್ರತಿದಿನವೂ ಕುಡಿತದ ಚಟಕ್ಕೆ ಬಿದ್ದಿದ್ದ ತಂದೆ, ಮಗಳು ಹಣ ಕೊಡಲಿಲ್ಲವೆಂದು ಅವಳ ಕೈಕಾಲು ಕಟ್ಟಿ ಕಾಲುವೆಗೆ ಎಸೆದು ಕೊಲೆ ಮಾಡಿರುವ ಘಟನೆ ಬಂಡಿಹಟ್ಟಿ ಪ್ರದೇಶದಲ್ಲಿ ನಡೆದಿದೆ.
ಆರೋಗ್ಯ ಸಚಿವ ಶ್ರೀರಾಮುಲು ಕಚೇರಿಯಲ್ಲಿ ಟೈಪಿಸ್ಟ್ ಕೆಲಸ ಮಾಡುತ್ತಿದ್ದ ಪಲ್ಲವಿ ಎಂಬ ಯುವತಿಯೇ ಕೊಲೆಯಾದವಳು. ತಂದೆ ಆಟೋ ಸೂರಿ ಮಗಳನ್ನ ಕುಡಿತಕ್ಕಾಗಿ ಹಣ ಕೊಡುವಂತೆ ಪೀಡಿಸುತ್ತಿದ್ದ, ಹಣ ಕೊಡದೇ ಇದ್ದರೇ ತಂದೆ ಕುಡಿತ ಬಿಡಬಹುದೆಂದುಕೊಂಡಿದ್ದ ಫಲ್ಲವಿ ಎರಡು ದಿನದಿಂದ ಹಣ ಕೊಟ್ಟಿರಲಿಲ್ಲ. ಇದನ್ನೇ ಗಂಭೀರವಾಗಿ ತೆಗೆದುಕೊಂಡ ಆಟೋ ಸೂರಿ ಮಗಳನ್ನ ಕಾಲುವೆ ಬಳಿ ಕರೆದುಕೊಂಡು ಹೋಗಿ ಕೈಕಾಲು ಕಟ್ಟಿ ಕಾಲುವೆಗೆ ಎಸೆದು ಪೊಲೀಸರಿಗೆ ಶರಣಾಗಿದ್ದಾನೆ.