ಯಡಿಯೂರಪ್ಪ ಬರ್ತಡೇ ದಿನವೇ ಮಹದಾಯಿ ನೋಟಿಫಿಕೇಷನ್ ಹೊರಡಿಸಿದ ಕೇಂದ್ರ: ಕರ್ನಾಟಕಕ್ಕೆ ಬಿಗ್ ಗಿಫ್ಟ್
ನವದೆಹಲಿ: ಮಹಾದಾಯಿ ಯೋಜನೆಯಲ್ಲಿ ಕರ್ನಾಟಕಕ್ಕೆ ಮಹಾ ಯಶಸ್ಸು. ಕುಡಿಯುವ ನೀರಿನ ಯೋಜನೆ ಕೈಗೊಳ್ಳುವ ಸಂಬಂಧ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ಕೇಂದ್ರ ಸರ್ಕಾರ. ಸುಪ್ರೀಂ ಕೋರ್ಟ್ ತೀರ್ಪಿನ ಬೆನ್ನಲ್ಲೇ ಮಿಂಚಿನ ವೇಗದಲ್ಲಿ ಗೆಜೆಟ್ ನೋಟಿಫಿಕೇಶನ್ ಹೊರಡಿಸಿದ ಕೇಂದ್ರ ಸರ್ಕಾರ, ಕರ್ನಾಟಕದ ಸಿಎಂ ಯಡಿಯೂರಪ್ಪ ಅವರಿಗೆ ಹುಟ್ಟುಹಬ್ಬದ ದಿನವೇ ಬಿಗ್ ಗಿಫ್ಟ್ ಕೊಟ್ಟಂತಾಗಿದೆ.
ಕರ್ನಾಟಕದ ಪಾಲಿಗೆ ವರವಾಗಿ ಪರಿಣಮಿಸಲಿದೆ ಗೆಜೆಟ್ ನೋಟಿಫಿಕೇಶನ್. ಈ ಗೆಜೆಟ್ ನೋಟಿಫಿಕೇಶನ್‌ನಿಂದಾಗಿ ಕರ್ನಾಟಕ 13.5 ಟಿಎಂಸಿ ನೀರನ್ನು ಕುಡಿಯುವ ನೀರಿಗಾಗಿ ಬಳಸಿಕೊಳ್ಳಲು ಅವಕಾಶ ಸಿಕ್ಕಂತಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಹುಟ್ಟುಹಬ್ಬದ ದಿನವೇ ಕೇಂದ್ರ ಸರ್ಕಾರದಿಂದ ಬಿಗ್ ಗಿಫ್ಟ್.
ಇತ್ತೀಚಿಗೆ ಸುಪ್ರೀಂ ಕೋರ್ಟ್ ನೀಡಿದ್ದ ಮಧ್ಯಂತರ ತೀರ್ಪಿನ ಪ್ರಕಾರ ಈ ಗೆಜೆಟ್ ನೋಟಿಫಿಕೇಶನ್ ಹೊರಡಿಸಲಾಗಿದೆ. ಮಹದಾಯಿ ಯೋಜನೆಯ ಮೂಲ ದಾವೆ ಮುಂದುವರಿಯಲಿದೆ. ಮೂಲ ದಾವೆಯಲ್ಲಿ ರಾಜ್ಯ ಇನ್ನಷ್ಟು ಹೆಚ್ಚಿನ ಪಾಲು ಕೇಳುತ್ತಿದೆ. ಕುಡಿಯುವ ನೀರಿಗಾಗಿ 13.05 ಟಿಎಂಸಿ ನೀರು ಬಳಸಲು ಅವಕಾಶ ಕೋರಿದ್ದ ರಾಜ್ಯದ ಪರ ಮಧ್ಯಂತರ ತೀರ್ಪು ನೀಡಿದ್ದ ಸುಪ್ರೀಂ ಕೋರ್ಟ್.