ಸಂಗೀತ ನಿರ್ದೇಶಕ ಅರ್ಜುನ ಜನ್ಯ ಚೇತರಿಕೆ: ಮೈಸೂರಲ್ಲಿ ಮುಂದುವರೆದ ಚಿಕಿತ್ಸೆ

ಮೈಸೂರು: ಕನ್ನಡ ಚಿತ್ರರಂಗದ ಖ್ಯಾತ ಸಂಗೀತ ನಿರ್ದೇಶಕ ಅರ್ಜುನ ಜನ್ಯ ಆರೋಗ್ಯದಲ್ಲಿ ಸುಧಾರಣೆಯಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಜನ್ಯರಿಗೆ ಲಘು ಹೃದಯಾಘಾತವಾಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.
ಎದೆಯುರಿ ಎಂದು ಆಸ್ಪತ್ರೆಗೆ ಬಂದ ನಂತರ ಜನ್ಯರಿಗೆ ಹೃದಯಾಘಾತವಾದ ಬಗ್ಗೆ ನಿಖರವಾಯಿತು. ತಕ್ಷಣವೇ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ನೀಡಿ ಮೆಡಿಕೇಟೆಡ್ ಸ್ಟಂಟ್ ಅಳವಡಿಕೆ ಮಾಡಲಾಗಿದೆ. ಈಗಲೂ ಐಸಿಯುನಲ್ಲಿಡಲಾಗಿದ್ದು, ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ.