ನಷ್ಟ ಸರಿದೂಗಿಸಲು ಬಸ್ ದರ ಏರಿಕೆ: ಲಕ್ಷ್ಮಣ ಸವದಿ

ಬೆಂಗಳೂರು: ಸಾರಿಗೆ ನಿಗಮಗಳು ನಷ್ಟದಲ್ಲಿ ಸಾಗುತ್ತಿದೆ. ಇದನ್ನ ಸರಿದೂಗಿಸುವ ಉದ್ದೇಶದಿಂದ ಪ್ರಯಾಣ ದರವನ್ನ ಏರಿಕೆ ಮಾಡಲಾಗಿದೆ ಎಂದು ಸಾರಿಗೆ ಇಲಾಖೆ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಹೇಳಿದ್ದಾರೆ.
2014ರಿಂದಲೂ ಬಸ್ ದರ ಏರಿಕೆ ಮಾಡಿರಲೇ ಇಲ್ಲ. ಇದರಿಂದ ಸಂಸ್ಥೆಗೆ ನಷ್ಟ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇತ್ತು. ಈ ಕಾರಣದಿಂದ ಬಡವರಿಗೆ ಹೊರೆಯಾಗದ ರೀತಿಯಲ್ಲಿ ಪ್ರಯಾಣದ ದರವನ್ನ ಏರಿಸಲಾಗಿದೆ ಎಂದು ಸವದಿ ತಿಳಿಸಿದರು.