ತಿರುಪತಿ ತಿರುಮಲ: 3310 ಕೋಟಿ ಆದಾಯ ನಿರೀಕ್ಷೆ

ತಿರುಪತಿ: ವಿಶ್ವ ಪ್ರಸಿದ್ಧ ವೆಂಕಟೇಶ್ವರ ದೇಗುಲವಾದ ತಿರುಪತಿತಿರುಮಲ ದೇವಾಲಯ 2020-21ರ ವಾರ್ಷಿಕ ಬಜೆಟ್ ಪ್ರಕಟಿಸಿದ್ದು, ಈ ಬಾರಿ ದೇವಾಲಯದಿಂದ ಬರೋಬ್ಬರಿ 3310 ಕೋಟಿ ರೂಪಾಯಿ ಆದಾಯ ನಿರೀಕ್ಷೆ ಮಾಡಲಾಗಿದೆ.
ಭಕ್ತಾಧಿಗಳಿಂದ 1351 ಕೋಟಿ ರೂಪಾಯಿ ಕಾಣಿಕೆಯನ್ನ ನಿರೀಕ್ಷೆ ಮಾಡಲಾಗಿದೆ. ಹಲವು ಬ್ಯಾಂಕುಗಳಲ್ಲಿಟ್ಟಿರುವ ಠೇವಣಿ ಹಣದಿಂದ 706 ಕೋಟಿ ರೂಪಾಯಿ ಬಡ್ಡಿ ನಿರೀಕ್ಷಿಸಲಾಗಿದೆ. ವಿವಿಧ ರೀತಿಯ ಪೂಜಾವಿಧಿಗಳು, ಸೇವೆಗಳು ಹಾಗೂ ದರ್ಶನದ ಟಿಕೆಟ್ ಮಾರಾಟದಿಂದ 300 ಕೋಟಿ, ಲಾಡು ಮಾರಾಟದಿಂದ 400 ಕೋಟಿ ರೂಪಾಯಿ ಆದಾಯದ ನಿರೀಕ್ಷೆ ಮಾಡಲಾಗಿದೆ.