ಗುಜರಾತ: ಲಕ್ಷ ಕೆಜಿ ಗೋಮಾಂಸ ವಶ

ಅಹಮದಾಬಾದ್: ಪ್ರಾಣಿ ಸಂರಕ್ಷಣಾ ತಿದ್ದುಪಡಿ ಕಾಯ್ದೆ ಜಾರಿಯಲ್ಲಿರುವ ಗುಜರಾತನಲ್ಲಿ ಬರೋಬ್ಬರಿ 1ಲಕ್ಷ ಕೆಜಿ ಗೋಮಾಂಸವನ್ನ ಕಳೆದೆರಡು ವರ್ಷದಲ್ಲಿ ವಶಕ್ಕೆ ಪಡೆಯಲಾಗಿದೆ.
2017ರಲ್ಲಿ ಜಾರಿಗೆ ತರಲಾದ ಕಸಾಯಿ ಖಾನೆ ನಿಯಮ ಎಷ್ಟರಮಟ್ಟಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದು ಪ್ರತಿಪಕ್ಷ ಪಶ್ನಿಸಿದ್ದಕ್ಕೆ ಉತ್ತರದ ರೂಪದಲ್ಲಿ, ಸರಕಾರವೂ ಈ ಮಾಹಿತಿಯನ್ನ ವಿಧಾನಸಭೆಯಲ್ಲಿ ಪ್ರಕಟಿಸಿದೆ.
ಗುಜರಾತ್ ಪ್ರಾಣಿ ಸಂರಕ್ಷಣಾ ತಿದ್ದುಪಡಿ ಕಾಯ್ದೆಯ ಪ್ರಕಾರ ಗೋಹತ್ಯೆ, ಜೀವಾವಧಿ ಶಿಕ್ಷೆಗೆ ಒಳಪಡಿಸಬಹುದಾದ ಅಪರಾಧವಾಗಿದೆ.