ಆಧಾರ್-ಪ್ಯಾನ್ ಲಿಂಕ್ ತಪ್ಪಿದರೇ 10ಸಾವಿರ ದಂಡ: ಮಾರ್ಚ ತಿಂಗಳೇ ಕೊನೆ

ನವದೆಹಲಿ: ಮಾರ್ಚ ಅಂತ್ಯದೊಳಗೆ ಪ್ಯಾನ್ ಸಂಖ್ಯೆಗೆ ಆಧಾರ್ ಕಾರ್ಡ್ ಜೋಡಣೆ ಮಾಡದಿದ್ದರೇ ಪ್ಯಾನ್ ಕಾರ್ಡ್ ನಿಷ್ಕ್ರೀಯವಾಗುವ ಜೊತೆಗೆ 10ಸಾವಿರ ರೂಪಾಯಿ ದಂಡ ಸಹ ತೆರಬೇಕಾಗುತ್ತದೆ.
ಪ್ಯಾನ್ ಕಾರ್ಡ್ ದಾರರಿಗೆ ಸ್ಪಷ್ಟ ಎಚ್ಚರಿಕೆ ನೀಡಿರುವ ಆದಾಯ ತೆರಿಗೆ ಇಲಾಖೆ, ಗಡುವಿನೊಳಗೆ ಪ್ಯಾನ್ ಸಂಖ್ಯೆಗೆ ಆಧಾರ್ ಸಂಖ್ಯೆಯನ್ನ ಜೋಡಣೆ ಮಾಡಲೇಬೇಕು. ಅದಾದ ನಂತರವೂ ಅದೇ ಪ್ಯಾನ್ ಕಾರ್ಡ್ ಬಳಕೆ ಮಾಡುವುದು ಕಂಡು ಬಂದರೇ 10ಸಾವಿರ ರೂಪಾಯಿ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.