ಹೀನಾಯ ಸೋಲಿಗೆ ವಿರಾಟ್ ಕೊಹ್ಲಿ ಕಾರಣ: ವಿವಿಎಸ್ ಲಕ್ಷ್ಮಣ

ನವದೆಹಲಿ: ನ್ಯೂಜಿಲೆಂಡ್ ವಿರರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಹೀನಾಯ ಸೋಲು ಕಾಣಲು ಭಾರತದ ನಾಯಕ ವಿರಾಟ್ ಕೊಹ್ಲಿ ಬ್ಯಾಂಟಿಗನಲ್ಲಿ ವಿಫಲವಾಗಿದ್ದೆ ಕಾರಣ ಎಂದು ಹಿರಿಯ ಆಟಗಾರ ವಿವಿಎಸ್ ಲಕ್ಷ್ಮಣ ಅಭಿಪ್ರಾಯಪಟ್ಟಿದ್ದಾರೆ.
ಈ ಹಿಂದಿನ ಹಲವು ಸರಣಿಗಳಲ್ಲಿ ಉತ್ತಮ ಪ್ರದರ್ಶನ ನೀಡುವ ಮೂಲಕ ತಂಡಕ್ಕೆ ನೆರವಾಗುತ್ತಿದ್ದ ಕೊಹ್ಲಿ, ನ್ಯೂಜಿಲೆಂಡ್ ಸರಣಿಯಲ್ಲಿ ಅತ್ಯಂತ ಕಳಫೆ ಪ್ರದರ್ಶನ ನೀಡಿದರು. ಇದು ತಂಡದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿತು ಎಂದು ಲಕ್ಷ್ಮಣ ಹೇಳಿದ್ದಾರೆ.