ಕುರುಬರ ಮನೆಯಲ್ಲಿ ನಿಧಿ ಪತ್ತೆ: ಮನೆ ಸುತ್ತಲೂ ಪೊಲೀಸ್ ಕಾವಲು

ಹಾವೇರಿ: ಮನೆ ಪಾಯ ತೆಗೆಯುವಾಗ 18ನೇ ಶತಮಾನದ ಬೆಳ್ಳಿ-ಚಿನ್ನದ ನಾಣ್ಯಗಳು ಸಿಕ್ಕಿರುವ ಘಟನೆ ಹಾನಗಲ್ ತಾಲೂಕಿನ ವರ್ಧಿ ಗ್ರಾಮದಲ್ಲಿ ನಡೆದಿದೆ.
ಲಕ್ಷ್ಮವ್ವ ಕುರುಬರ ಹೊಸ ಮನೆ ನಿರ್ಮಾಣಕ್ಕಾಗಿ ಪಾಯ ತೆಗೆಯಲು ಮುಂದಾಗಿದ್ದರು. ಪಾಯ ತೆಗೆಯುವ ಸಮಯದಲ್ಲಿ ಜವಳು ಮಿಶ್ರಿತ ಮಣ್ಣು ಹತ್ತಿದೆ. ಹಾಗಾಗಿ ಹೆಚ್ಚು ಪಾಯ ತೆಗೆಯಲು ಮುಂದಾದಾಗ 18ನೇ ಶತಮಾನದ ರಾಜ-ರಾಣಿ ಚಿತ್ರವಿರುವ 169 ಬೆಳ್ಳಿ, 2ಚಿನ್ನದ ನಾಣ್ಯಗಳು ಹಾಗೂ 6ಬೆಳ್ಳಿ ಉಂಗುರುಗಳು ದೊರಕಿವೆ.
ಸ್ಥಳಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಸ್ಥಳವನ್ನ ತಮ್ಮ ಸುಪರ್ಧಿಗೆ ಪಡೆದಿದ್ದಾರೆ. ಮನೆಯ ಸುತ್ತಲೂ ಪೊಲೀಸರ ನಿಯೋಜನೆ ಮಾಡಲಾಗಿದ್ದು, ಗ್ರಾಮಸ್ಥರಲ್ಲಿ ಈ ಘಟನೆ ವಿಸ್ಮಯ ಮೂಡಿಸಿದೆ.