ಒನ್ ಸೈಡ್ ಲವ್: ಯುವಕ ಸಾವಿಗೆ ಶರಣು

ಹಾವೇರಿ: ಪ್ರೀತಿಸಿದವಳು ತನಗೆ ಸಿಗಲ್ಲವೆಂದುಕೊಂಡ ಯುವಕ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಹಾನಗಲ್ ತಾಲೂಕಿನ ನಾಗನೂರ ಗ್ರಾಮದಲ್ಲಿ ಸಂಭವಿಸಿದೆ.
ಶರಣಪ್ಪ ತಳವಾರ ೆಂಬ ಯುವಕನೇ ಸಾವಿಗೀಡಾಗಿದ್ದು, ತಾನು ಪ್ರೀತಿಸಿದ ಹುಡುಗಿ ತನ್ನ ಪಾಲಕರ ಭಯದಿಂದ ಮದುವೆಯಾಗಲು ಒಲ್ಲೆ ಎನ್ನುತ್ತಿದ್ದಾಳೆಂದುಕೊಂಡ ಶರಣಪ್ಪ, ಯಾರೂ ಮನೆಯಲ್ಲಿ ಇಲ್ಲದಾಗ ವಿಷ ಸೇವಿಸಿದ್ದಾನೆ. ನೋಡಿದವರು ಆಸ್ಪತ್ರೆಗೆ ಸಾಗಿಸುವ ಪ್ರಯತ್ನ ಮಾಡಿದರಾದರೂ ಶರಣಪ್ಪ ಬದುಕಿಲ್ಲ.