ಭಾಗ್ಯಲಕ್ಷ್ಮೀ ಬಾಂಡ್-ಸೈಕಲ್ ವಿತರಣೆ ನಿರಂತರ: ಸಿಎಂ ಯಡಿಯೂರಪ್ಪ ಘೋಷಣೆ

ಬೆಂಗಳೂರು: ರಾಜ್ಯದಲ್ಲಿ ಈ ಹಿಂದೆ ಬಿಜೆಪಿ ಸರಕಾರ ಜಾರಿಗೆ ತಂದಿದ್ದ ಭಾಗ್ಯಲಕ್ಷ್ಮೀ ಬಾಂಡ್ ಮತ್ತು ಸೈಕಲ್ ವಿತರಣೆ ನಿರಂತರವಾಗಿ ನಡೆಯಲಿದೆ ಎಂದು ಬಜೆಟ್ ನಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಬಜೆಟ್ ನಲ್ಲಿನ ಅಂಶಗಳನ್ನ ಓದಿದ ಸಿಎಂ, ಭಾಗ್ಯಲಕ್ಷ್ಮೀ ಬಾಂಡ್, ಸೈಕಲ್ ವಿತರಣೆ ಸೇರಿದಂತೆ ಜನಪ್ರಿಯ ಯೋಜನೆಗಳು ಮೊದಲಿನಂತೆ ಕಾರ್ಯನಿರ್ವಹಿಸಲಿವೆ ಎಂದರು.
ಕಳೆದ ಎರಡು ವರ್ಷದಿಂದ ಭಾಗ್ಯಲಕ್ಷ್ಮೀ ಬಾಂಡ್ ಮಾಹಿತಿಯನ್ನೂ ಪಡೆಯದೇ ಇದ್ದಿದ್ದರಿಂದ ಬಡವರಲ್ಲಿ ಸಾಕಷ್ಟು ಬೇಸರ ಮೂಡಿಸಿತ್ತು. ಇಂದಿನ ಸಿಎಂ ಹೇಳಿಕೆಯಿಂದ ಬಡವರಲ್ಲಿ ಮತ್ತಷ್ಟು ಆಶಾಭಾವನೆ ಮೂಡಿದೆ.