ರಾಜ್ಯದ ಬಜೆಟ್: ಪೆಟ್ರೋಲ್, ಡಿಸೇಲ್ ದರ ಏರಿಕೆ

ಬೆಂಗಳೂರು: ಸಿಎಂ ಯಡಿಯೂರಪ್ಪ ಬಜೆಟ್ ಮಂಡನೆಯಲ್ಲಿ ಡಿಸೇಲ್, ಪೆಟ್ರೋಲ್ ಮೇಲಿನ ಸೆಸ್ ಹೆಚ್ಚಿಗೆ ಮಾಡುವುದಾಗಿ ಹೇಳಿದ ಪರಿಣಾಮ ಪೆಟ್ರೋಲ್ ಮತ್ತು ಡಿಸೇಲ್ ದರ ಇಂದಿನಿಂದಲೇ ಹೆಚ್ಚಾಗಲಿದ್ದು, ಗ್ರಾಹಕರ ಮೇಲೆ ಮತ್ತೊಂದು ಬರೆ ಬೀಳಲಿದೆ.
ದರ ಹೆಚ್ಚಳದ ಬರೆ ಒಂದ ಮೇಲೊಂದು ಬೀಳುತ್ತಿರುವ ಸಮಯದಲ್ಲೇ ರಾಜ್ಯದ ಬಜೆಟ್ ಕೂಡಾ, ಮತ್ತೊಂದು ಬರೆಯನ್ನ ನೀಡಿದೆ. ಡಿಸೇಲ್ ದರದಲ್ಲಿ 1.60 ರೂಪಾಯಿ ಮತ್ತು ಪೆಟ್ರೋಲ್ ದರದಲ್ಲಿ 1.59 ರೂಪಾಯಿ ಹೆಚ್ಚಾಗಲಿದೆ. ಸೆಸ್ ಹೆಚ್ಚು ಮಾಡಿರುವುದರಿಂದ ಪರಿಣಾಮವನ್ನ ಗ್ರಾಹಕರು ಹೊರಬೇಕಿದೆ.