ಯಡಿಯೂರಪ್ಪನವರಿಗಾಗಿ ರಾಜೀನಾಮೆ ನೀಡಿದ್ದೆ: ಬಿ.ಸಿ.ಪಾಟೀಲ

ಹಾವೇರಿ: ರಾಜ್ಯದ ಅಭಿವೃದ್ಧಿಗೆ ನಾವೆಲ್ಲಾ ರಾಜೀನಾಮೆ ಕೊಟ್ಟು ಬಂದೆವು. ಸಿಎಂ ಯಡಿಯೂರಪ್ಪ ಮುಖ್ಯಮಂತ್ರಿಯಾದರು. ಅವರು ಮುಖ್ಯಮಂತ್ರಿಯಾಗಿದ್ದಕ್ಕೆ ಇಷ್ಟೊಂದು ಅನುದಾನ ಬಂತು. ಚುನಾವಣೆ ಸಂದರ್ಭ ಮಾತು ಕೊಟ್ಟಿದ್ದರು. ಶಿಖಾರಿಪುರ ಮತ್ತು ಹಿರೇಕೆರೂರು ಎರಡು ಕಣ್ಣುಗಳ ತರ ನೋಡಿಕೊಳ್ತಿನಿ ಎಂದಿದ್ದರು. ಅದರಂತೆ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧರಾಗಿದ್ದಾರೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ ಹೇಳಿದರು.
ಕೃಷಿ ಬಜೆಟ್ ಮಂಡಿಸಿದರು. ಹಸಿರು ಶಾಲು ಹೊತ್ತು, ರೈತರ ಹೆಸರಿನಲ್ಲಿ ಬಜೆಟ್ ನೀಡಿದ್ದಾರೆ. ರೈತರ ಅಭಿವೃದ್ಧಿಗೆ ಬಜೆಟ್ ಮಂಡಿಸಿದ್ದಾರೆ. ನಾನು ಈ ರಾಜ್ಯದ, ದೇಶದ ರೈತ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಕ್ರಮ ಕೈಗೊಂಡಿದ್ದಾರೆ. ಆ ಮೂಲಕ ಯಡಿಯೂರಪ್ಪ ಅವರು ಮಾದರಿಯಾಗಿದ್ದಾರೆಂದು ಪಾಟೀಲ ನುಡಿದರು.
ರೈತರ ಪರವಾಗಿ ಮನವಿ ಮಾಡಿದ ಕೃಷಿ ಸಚಿವ ಬಿ.ಸಿ.ಪಾಟೀಲ, ರೈತರು ಮೆಕ್ಕೆಜೋಳ ಬೆಳೆದಿದ್ದಾರೆ. ನಿಮ್ಮಲ್ಲಿ ಮನವಿ ಮಾಡುತ್ತೇವೆ. ಕೇಂದ್ರ ಮೆಕ್ಕೆಜೋಳ
ಖರೀದಿಸುವುದು ಬಿಟ್ಟಿದ್ದಾರೆ. ಆದ್ದರಿಂದ ರಾಜ್ಯ ಸರಕಾರ ಬೆಂಬಲ ಬೆಲೆ ಕೊಡಬೇಕೆಂದು ಮನವಿ ಮಾಡಿದರು.