ಸಿದ್ಧೇಶ್ವರ ಶ್ರೀಗಳ ಮುಂದೆ ತಲೆಬಾಗಿ ನಿಂತ ಮಾಜಿ ಪ್ರಧಾನಿ ದೇವೇಗೌಡ

ಹುಬ್ಬಳ್ಳಿ: ರೇವಡಿಹಾಳ ರಸ್ತೆಯ ಹೊಲವೊಂದರಲ್ಲಿ ನಡೆಯುತ್ತಿರುವ ಪರಮಪೂಜ್ಯ ಶ್ರೀ ಸಿದ್ಧೇಶ್ವರ ಶ್ರೀಗಳ ಪ್ರವಚನ ಸ್ಥಳಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಭೇಟಿ ನೀಡಿ, ಕೆಲಕಾಲ ಪ್ರವಚನ ಆಲಿಸಿದರು.
ಶನಿವಾರದಿಂದ ಹುಬ್ಬಳ್ಳಿಯಲ್ಲೇ ತಂಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರವಚನ ಆಲಿಸಿದ ನಂತರ ಶ್ರೀಗಳ ಆಶೀರ್ವಾದ ಪಡೆದರು. ಕೆಲಕಾಲ ಶ್ರೀಗಳ ಮುಂದೆ ಕೈ ಮುಗಿದ ನಿಂತ ದೇವೇಗೌಡರು, ಶ್ರೀಗಳ ಮಾತಿನ ತಲೆತೆಗ್ಗಿಸಿ ವಿನೀತ ಭಾವದಿಂದ ಕೇಳಿದರು.
ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಮಾಜಿ ಶಾಸಕ ಎನ್.ಎಚ್.ಕೋನರೆಡ್ಡಿ, ಎಂ.ಎಸ್.ಅಕ್ಕಿ, ರಾಜಣ್ಣ ಕೊರವಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.