ವಿಜ್ಞಾನ ಲೋಕದ ರಂಗು ರಂಗಿನ ಕ್ರಾಂತಿಗಳು

ನಾಡಿನ ತುಂಬ ಇದೀಗ ಬಣ್ಣದಬ್ಬದೋಕುಳಿ. ಎಲ್ಲಿ ನೋಡಿದರೂ ತಮಟೆಗಳ ಸದ್ದು.. ಕಾಮದಹನ ಬೆಂಕಿ.. ಬೀದಿಗಳಿಗೆ ರಂಗು ರಂಗಿನ ತವಕ.. ಬಣ್ಣದಾಟದಲ್ಲಿ ಮಿಂದವರಿಗೆ ಬಣ್ಣದ ಜಗತ್ತು ಹೇಗಿರತ್ತೆ ಅನ್ನೋದನ್ನ ತಿಳಿಸೋ ಪ್ರಯತ್ನವಿದು. ವಿಜ್ಞಾನ ಲೋಕದಲ್ಲಿಯೂ ಕೂಡ ಇಂತಹ ಅನೇಕ ಬಣ್ಣಗಳ ಕ್ರಾಂತಿ ನಡೆದಿವೆ. ಆ ರಂಗಿನ ಕ್ರಾಂತಿಯಿಂದ ದೇಶ ಇಂದು ಸುಭದ್ರವಾಗಿ ಮುನ್ನಡೆಯುತ್ತಿದೆ.
ಅಂತಹ ಕ್ರಾಂತಿಗಳ ಕಿರು ಪರಿಚಯವನ್ನು ಹೊತ್ತು ಕರ್ನಾಟಕ ವಾಯ್ಸ್ ನಿಮ್ಮ ಮುಂದೆ ಬಂದಿದೆ.
ಓಕುಳಿಯ ನೆಪದಲ್ಲಿ ಬಣ್ಣಗಳ ಹೆಸರುಗಳಿಂದ ಪ್ರಸಿದ್ದಿ ಪಡೆದ ಕೆಲವು ಕ್ರಾಂತಿಗಳಾವವು ಗೊತ್ತಾ.. ?
ಹಸಿರು ಕ್ರಾಂತಿ:
ಇಡೀ ವಿಶ್ವ ಬೆಳೆಯುತ್ತಿರುವ ಜನಸಂಖ್ಯೆಯ ಪರಿಣಾಮದಿಂದ ಆಹಾರದ ಕೊರತೆ ಎದುರಿಸುವ ದುರಂತದಲ್ಲಿತ್ತು. ಆಗ ಕಡಿಮೆ ಅವಧಿಯಲ್ಲಿ ಹೆಚ್ಚಿನ ಇಳುವರಿ ನೀಡಬಲ್ಲ ರೋಗ ನಿರೋಧಕ ಗೋದಿ ತಳಿ ಸೇರಿದಂತೆ ದವಸ ಧಾನ್ಯಗಳನ್ನು ಕ್ಷಿಪ್ರಗತಿಯಲ್ಲಿ ಬೆಳೆಯುವ ತಾಂತ್ರಿಕತೆಯನ್ನು ವಿಜ್ಞಾನಿಗಳು ಹುಟ್ಟು ಹಾಕಿದರು. ಪರಿಣಾಮವಾಗಿ ಕೃಷಿ ಚಟುವಟಿಕೆಗಳು ಕ್ಷಿಪ್ರಗತಿಯಲ್ಲಿ ಹೆಚ್ಚಿದವು. ಇದನ್ನು ಹಸಿರು ಕ್ರಾಂತಿ ಎನ್ನುವರು. ಇದಕ್ಕೆ ಕಾರಣ ನಾರ್ಮನ್ ಬೊರ್ಲಾಗ್ (ಹಸಿರು ಕ್ರಾಂತಿಯ ಪಿತಾಮಹ). ಭಾರತದ ಹಸಿರು ಕ್ರಾಂತಿಯ ಪಿತಾಮಹ ಡಾ. ಎಮ್. ಎಸ್. ಸ್ವಾಮಿನಾಥನ್.
ಶ್ವೇತ ಕ್ರಾಂತಿ:
ಡಾ.ವರ್ಗೀಸ್ ಕುರಿಯನ್ (ಶ್ವೇತ ಕ್ರಾಂತಿಯ ಪಿತಾಮಹ), ಹಾಲನ್ನು ಸಂಸ್ಕರಿಸಿ ಪುಡಿ ರೂಪದಲ್ಲಿ ಸಂಗ್ರಹಿಸುವ ತಾಂತ್ರಕತೆಯನ್ನು ಪರಿಚಯಿಸಿದರು. ಹೈನೋದ್ಯಮದಲ್ಲಿ ಬದಲಾವಣೆಯ ಗಾಳಿ ಬೀಸತೊಡಗಿತು. ರೈತರೆಲ್ಲರಿಗೂ ನೇರವಾಗಿ ಲಾಭ ದೊರೆಯತೊಡಗಿತು. ರೈತರೆಲ್ಲ ಹೈನುಗಾರಿಕೆಗೆ ಧುಮುಕಿದ ಪರಿಣಾಮದಿಂದಾಗಿ, ಹಾಲು ಉತ್ಪಾದನೆಯಲ್ಲಿ ಭಾರತ ಅಮೆರಿಕಾವನ್ನೆ ಹಿಮ್ಮೆಟಿಸಿತು. ಇದನ್ನು ಕ್ಷೀರ ಕ್ರಾಂತಿ/ ಆಪರೇಷನ್ ಫ್ಲಡ್ ಎನ್ನುವರು.
ನೀಲಿ ಕ್ರಾಂತಿ:
ನೀಲಿ ಕ್ರಾಂತಿಯೂ ಮೀನುಗಾರಿಕೆಗೆ ಸಂಬಂದಿಸಿದ್ದಾಗಿದ್ದು. ಮೀನು ಮರಿಗಳ ಸಂರಕ್ಷಣೆ, ಶ್ರಿಂಪ್, ಕ್ರ್ಯಾಬ್ ಗಳ ಉತ್ಪಾದನೆಗೆ ಒತ್ತು ನೀಡಲಾಗುತ್ತದೆ.
ಪಿತಾಮಹ – ಡಾ. ಅರುಣ ಕೃಷ್ಣನ್ ಹಾಗೂ ಡಾ.ಹಿರಾಲಾಲ್ ಚೌದರಿ.
ಹಳದಿ ಕ್ರಾಂತಿ:
ಇದು ಎಣ್ಣೆ ಬೀಜಗಳ ಉತ್ಪಾದನೆಗೆ ಸಂಬಂದಿಸಿದ್ದು. ಶೇಂಗಾ, ಸಾಸಿವೆ, ಸೋಯಾಬೀನ್, ಸೂರ್ಯಕಾಂತಿ ಸೇರಿದಂತೆ ವಿವಿಧ ಎಣ್ಣೆ ಬೀಜಗಳ ಸಂರಕ್ಷಣೆಗೆ, ತಳಿ ಅಭಿವೃದ್ದಿಗೆ ಪ್ರಾಮುಖ್ಯತೆ ನೀಡಲಾಗುತ್ತದೆ.
ಪಿತಾಮಹ -ಡಾ. ಸ್ಯಾಮ್ ಪಿತ್ರೋಡ.
ಬೆಳ್ಳಿ ಕ್ರಾಂತಿ:
ಕೋಳಿ ಸಾಕಾಣಿಕೆಗೆ ಸಂಬಂದಿಸಿದಂತೆ ಶುರುವಾದ ಕ್ರಾಂತಿ ಇದು, ಇಂದಿರಾ ಗಾಂಧಿ (ಬೆಳ್ಳಿ ಕ್ರಾಂತಿಯ ಪಿತಾಮಹ) ನೇತೃತ್ವದಲ್ಲಿ ಪ್ರಾರಂಭವಾಗಿತ್ತು. ಮೊಟ್ಟೆಗಳ ಉತ್ಪಾದನೆ ಇದರ ಗುರಿಯಾಗಿತ್ತು.
ಬಂಗಾರ ಕ್ರಾಂತಿ:
ಈ ಕ್ರಾಂತಿಯು ತೋಟಗಾರಿಕೆ ಮತ್ತು ಜೇನು ಸಾಕಾಣಿಕೆ ಹಾಗೂ ಅವುಗಳ ಉತ್ಪನ್ನವನ್ನು ಹೆಚ್ಚಿಸುವ ಕುರಿತಾದದ್ದಾಗಿದೆ.
ಪಿತಾಮಹ- ನಿಫಾಕ್ ತುಟೆಜ್.
ಗುಲಾಬಿ ಕ್ರಾಂತಿ:
ಇದು ಈರುಳ್ಳಿ ಬೆಳೆ ಹಾಗೂ ಔಷಧ ಉದ್ಯಮ ಮತ್ತು ಸೀಗಡಿ ಮೀನಿಗೆ ಸಂಭಂದಿಸಿದ್ದು.
ಪಿತಾಮಹ – ಡಾ.ದುರ್ಗೆಶ ಪಟೇಲ್.
ಕೆಂಪು ಕ್ರಾಂತಿ:
ಇದು ಮಾಂಸ ಉತ್ಪಾದನೆಗೆ ಸಂಬಂಧಿಸಿದ ಕ್ರಾಂತಿ.
ಇದರ ಪಿತಾಮಹ ವಿಶಾಲ್ ತಿವಾರಿ.
ಹೀಗೆ ಕಪ್ಪು, ಬೂದು, ಕಂದು ಬಣ್ಣದ ಕ್ರಾಂತಿಗಳು ಪೆಟ್ರೋಲಿಯಂ, ರಸಗೊಬ್ಬರಗಳು, ಹಾಗೂ ಲೇದರ್ ಉತ್ಪಾದನೆಗೆ ಸಂಬಂದಿಸಿದ್ದವುಗಳಾಗಿವೆ.
ಇತ್ತೀಚಿಗೆ ರೇನ್ ಬೋ ಕ್ರಾಂತಿಯೊಂದು ಶುರುವಾಗಿದೆ. ಇದು ಮೇಲೆ ತಿಳಿಸಿದ ಎಲ್ಲ ಬಣ್ಣ ಬಣ್ಣದ ಕ್ರಾಂತಿಗಳ ಪ್ರಗತಿಯನ್ನು ಪರಿಶೀಲಿಸುವ ಉದ್ದೇಶ ಹೊಂದಿದೆ.
ಒಟ್ಟಿನಲ್ಲಿ ಈ ಬಣ್ಣಗಳ ಸಂಭ್ರಮದಲ್ಲಿ, ಪ್ರಗತಿಗೆ ಪೂರಕವಾದ ವೈವಿಧ್ಯಮಯ ಕ್ರಾಂತಿಗಳು, ದೇಶವನ್ನ ಉನ್ನತ ಹಂತಕ್ಕೆ ತಲುಪಿಸಿರುವದಂತೂ ಸತ್ಯ.
ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನ.