ಕಲಬುರ್ಗಿ ವ್ಯಕ್ತಿ: ಕರೋನಾ ಕನ್ ಫರ್ಮ್ ಇಲ್ಲಾ: ಜಿಲ್ಲಾಧಿಕಾರಿ ಬಿ. ಶರತ್

ಕಲಬುರಗಿ: ಸೌದಿಯಿಂದ ವಾಪಸ್ ಆಗಿದ್ದ ವ್ಯಕ್ತಿಗೆ ಚಿಕಿತ್ಸೆ ಕೊಡಿಸಲು ಹೈದರಾಬಾದ್ ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ ಚಿಕಿತ್ಸೆ ಸರಿಯಾಗಿ ದೊರಕದ ಕಾರಣ ವಾಪಸ್ ಬರುತ್ತಿದ್ದಾಗ ವ್ಯಕ್ತಿ ಸಾವಿಗೀಡಾಗಿದ್ದಾರೆ. ಆದರೆ, ಅವರಿಗೆ ಕರೋನಾ ಇರುವ ಬಗ್ಗೆ ನಿಖರವಾದ ಮಾಹಿತಿಯಿಲ್ಲ ಎಂದು ಜಿಲ್ಲಾಧಿಕಾರಿ ಬಿ.ಶರತ್ ಹೇಳಿದ್ದಾರೆ.
ಸೌದಿ ಅರೇಬಿಯಾದಿಂದ ಬಂದಿದ್ದ ವ್ಯಕ್ತಿಗೆ ಕರೋನಾ ತಗುಲಿ ಸಾವಿಗೀಡಾಗಿದ್ದಾರೆಂದು ರಾಜ್ಯದಾಧ್ಯಂತ ಊಹಾಪೋಹ ಎದ್ದು ಅನೇಕರಲ್ಲಿ ಆತಂಕ ಮೂಡಿಸಿತ್ತು. ಸತ್ಯ ತಿಳಿಯದೇ ಫೇಸ್ ಬುಕ್ ಮತ್ತು ವಾಟ್ಸಾಫಗಳಲ್ಲಿ ಹರಿದಾಡಿತ್ತು. ಅದನ್ನೇ ಬಹುತೇಕರು ನಂಬಿ ಸುಳ್ಳನ್ನೇ ಸತ್ಯವೆಂದು ನಂಬಿಸುವ ಪ್ರಯತ್ನ ಮಾಡಿದ್ದರು. ಆದರೆ, ಡಿಸಿ ಹೇಳಿಕೆಯಿಂದ ನಿಜಸ್ವರೂಪ ಬಯಲಾಗಿದೆ.