ಡಿಕೆಶಿ ಕೆಪಿಸಿಸಿ ಬಾಸ್: ರಾಜ್ಯ ಕಾಂಗ್ರೆಸ್ ಗೆ ಆನೆ ಬಲ

ನವದೆಹಲಿ: ಬಹುದಿನಗಳಿಂದ ಚರ್ಚೆಗೆ ಒಳಗಾಗಿದ್ದ ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮೀಟಿಯ ಅಧ್ಯಕ್ಷ ಗಾದಿಗೆ ಡಿ.ಕೆ.ಶಿವಕುಮಾರನ್ನ ನೇಮಕ ಮಾಡುವ ಮೂಲಕ ಹೊಸ ಭಾಷ್ಯ ಬರೆಯಲು ಎಐಸಿಸಿ ಮುದ್ರೆ ಒತ್ತಿದೆ.
ಕೆಪಿಸಿಸಿಗೆ ಅಧ್ಯಕ್ಷರಾಗಿದ್ದ ಜಿ.ಪರಮೇಶ್ವರ ನಂತರ ಯಾರೂ ಎಂಬ ಪ್ರಶ್ನೆಗೆ ಯಾವುದೇ ಉತ್ತರ ಸಿಗದೇ ಕಾಂಗ್ರೆಸ್ ನಲ್ಲೇ ಹಲವು ಗೊಂದಲಗಳು ಸೃಷ್ಠಿಯಾಗಿದ್ದವು. ಕಳೆದ ಮೂರ್ನಾಲ್ಕು ಬಾರಿ ಡಿ.ಕೆ.ಶಿವಕುಮಾರ ಹೆಸರು ಬಂದಿತ್ತಾದರೂ, ಕೆಲವರು ಇದನ್ನ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆಂದು ಹೇಳಲಾಗುತ್ತಿತ್ತು. ಆದರೀಗ, ಎಲ್ಲ ಅಂತೆಕಂತೆಗಳಿಗೆ ಫುಲ್ ಸ್ಟಾಫ್ ಹಾಕಿರುವ ಎಐಸಿಸಿ ಡಿಕೆಶಿಯವರನ್ನ ಅಧ್ಯಕ್ಷ ಮಾಡಿ ಆದೇಶ ಹೊರಡಿಸಿದೆ.