ಕರೋನಾಗೆ ಬಲಿ: ಸದನದಲ್ಲಿ ಗುಡುಗಿದ ಸಿದ್ಧು

ಬೆಂಗಳೂರು: ಕರೋನಾಗೆ ವೃದ್ಧಿರೋರ್ವರು ಬಲಿಯಾಗಿದ್ದು, ರಾಜ್ಯ ಸರಕಾರ ಸರಿಯಾದ ಕ್ರಮವನ್ನ ತೆಗೆದುಕೊಂಡಿಲ್ಲ. ಈಗಲಾದರೂ, ಕಲಬುರಗಿಗೆ ಹೊರಡಿ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ರಾಜ್ಯ ಸರಕಾರಕ್ಕೆ ತಪರಾಕಿ ಹಾಕಿದ್ದಾರೆ.
ಕರೋನಾ ಹೊಂದಿದ ವ್ಯಕ್ತಿಯನ್ನ ಸರಿಯಾದ ರೀತಿಯಲ್ಲಿ ತಪಾಸಣೆ ಮಾಡಿಲ್ಲ. ಕಲಬುರಗಿಯೊಳಗೆ ಪ್ರವೇಶ ಮಾಡಿದಾಗಲೂ ಅಗತ್ಯವಾದ ಕ್ರಮ ತೆಗೆದುಕೊಂಡಿಲ್ಲ. ಜನರಲ್ಲಿನ ಭಯವನ್ನ ಹೋಗಲಾಡಿಸಲು ಅಧಿಕಾರಿಗಳಿಗೆ ಸೂಚನೆ ನೀಡಿ. ನೀವೇ ಖುದ್ದಾಗಿ ಹೋಗಿ ಅಲ್ಲಿ ಸಭೆಗಳನ್ನ ನಡೆಸಿ ಎಂದು ಆರೋಗ್ಯ ಸಚಿವ ಶ್ರೀರಾಮುಲುಗೆ ಸಲಹೆ ನೀಡಿದರು.