ಕರೋನಾ ವೈರಸ್ ಭೀತಿ: ಐಪಿಎಲ್ ಗೆ ಬ್ರೇಕ್.. ?

ನವದೆಹಲಿ: ಕರೋನಾ ವೈರಸ್ ಭಾರತದಲ್ಲೂ ತಾಂಡವ ಶುರು ಮಾಡುತ್ತಿದಂತೆ ಹಲವು ಕಟ್ಟೇಚ್ಚರಗಳನ್ನ ತೆಗೆದುಕೊಳ್ಳಲಾಗುತ್ತಿದ್ದು, ಐಪಿಎಲ್ ಟೂರ್ನಿಯನ್ನ ನಿರ್ಭಂದಗೊಳಿಸುವ ಬಗ್ಗೆ ಚಿಂತನೆ ನಡೆಯುತ್ತಿದೆ.
ಮಾರ್ಚ್ 19ರಿಂದ ನಡೆಯಬೇಕಾಗಿದ್ದ ಟೂರ್ನಿಗೆ ದೆಹಲಿಯ ಉಪಮುಖ್ಯಮಂತ್ರಿ ಮನಿಷ ಸಿಸೋಡಿಯಾ ಪರವಾನಿಗೆ ಕೊಡೋದಕ್ಕೆ ಆಗಲ್ಲ ಎಂದು ಹೇಳಿದ್ದಾರೆ. ಇದರ ಜೊತೆಗೆ ಮಹಾರಾಷ್ಟ್ರ ಸರಕಾರ ಕೂಡಾ, ಟೂರ್ನಿಯನ್ನ ರದ್ದು ಮಾಡಬೇಕೆಂದು ಮನವಿ ಮಾಡಿಕೊಂಡಿದೆ.
ಕೋಟ್ಯಾಂತರ ರೂಪಾಯಿ ವಹಿವಾಟು ಹೊಂದಿರುವ ಟೂರ್ನಿಯನ್ನ ರದ್ದುಗೊಳಿಸುವ ಬಗ್ಗೆ ಬಿಸಿಸಿಐ ನಿರ್ಧಾರ ತೆಗೆದುಕೊಳ್ಳಬೇಕಿದೆ. ಐಪಿಎಲ್ ಸಿಸನ್-13 ಮೇಲೆ ಕರೋನಾ ಕರಿನೆರಳು ಬಿದ್ದಿರುವುದಂತೂ ಸತ್ಯ.