ಪೊಲೀಸರೇನು ಮನುಷ್ಯರಲ್ಲವೇ: ಅವರಿಗೂ ಕರೋನಾ ಕಾಳಜಿ ಕೊಡಬೇಕಲ್ಲವೇ..?

ಬೆಂಗಳೂರು: ದಿನದ 24ಗಂಟೆಯೂ ಕಾರ್ಯನಿರ್ವಹಿಸುವ ಪೊಲೀಸರ ಬಗ್ಗೆಯೂ ರಾಜ್ಯ ಸರಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ. ಈಗಾಗಲೇ ಶಾಲೆ-ಕಾಲೇಜುಗಳಿಗೆ ರಜೆ ನೀಡಿ, ಕರೋನಾ ಬಗ್ಗೆ ಕಾಳಜಿ ತೆಗೆದುಕೊಳ್ಳಲಾಗಿದೆ. ಹಾಗಾದರೆ, ಪೊಲೀಸರೇನು ಮನುಷ್ಯರಲ್ವೇ..
ಕರೋನಾ ವೈರಸ್ ಗೆ ಸಂಬಂಧಿಸಿದಂತೆ ಬಹುತೇಕರಿಗೆ ಮನೆಯಲ್ಲೇ ಕುಳಿತು ಕೆಲಸ ಮಾಡಿ ಎಂಬ ಸಂದೇಶವನ್ನ ಕೊಡಲಾಗುತ್ತಿದೆ. ಆದರೆ, ಅಂತಹ ಒಂದೇ ಒಂದು ಮಾತು ಪೊಲೀಸರಿಗೆ ಹೇಳೋಕೆ ಯಾರಿಂದಲೂ ಆಗುತ್ತಿಲ್ಲ. ಎಲ್ಲಿ ಹೆಚ್ಚು ಜನರು ಸೇರುತ್ತಾರೋ ಅಲ್ಲಿ ಪೊಲೀಸರೇ ಹೋಗಬೇಕಾದ ಅನಿವಾರ್ಯತೆ. ಜಾತ್ರೆ ನಡೆದರೂ, ಗದ್ದಲವಾದರೂ, ಜನಜಂಗುಳಿ ಸೇರಿದರೂ ಅವರೇ ಮೊದಲು ಹೋಗಬೇಕು.
ಪಾಪ.. ಪೊಲೀಸರು ಮನುಷ್ಯರೇ. ಅವರಿಗೆ ಎಲ್ಲ ರೀತಿಯ ಖಾಯಿಲೆಗಳು ಬರುವ ಸಾಧ್ಯತೆಗಳು ಇರ್ತವೆ. ಹಾಗಾಗಿ, ಪೊಲೀಸರ ಬಗ್ಗೆ ಕಾಳಜಿಯನ್ನ ಎಲ್ಲರೂ ತೋರಿಸಬೇಕಿದೆ. ಸಾಧ್ಯವಾದಷ್ಟು ಗೊಂದಲ ಮಾಡದೇ, ಗಲಾಟೆಗಳು ಆಗದಂತೆ ನೋಡಿಕೊಳ್ಳಿ. ಕೊನೆಪಕ್ಷ ಹೊರಗೆ ಬಾರದೇ ಠಾಣೆಯಲ್ಲೇ ಇದ್ದು ಸೇವೆ ಸಲ್ಲಿಸುವಂತಾಗಲಿ..