ಕೊರೋನಾ ಭೀತಿ: ಉಳವಿ, ಶ್ರೀಶೈಲ್, ಮಂತ್ರಾಲಯಕ್ಕೆ ಬರದಂತೆ ವಿನಂತಿ

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ದೇಶದ ಬಹುತೇಕ ಭಾಗಗಳಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರಗಳಾದ ಉಳವಿ ಚೆನ್ನಬಸವೇಶ್ವರ ದೇವಸ್ಥಾನ, ಶ್ರೀಶೈಲ್ ಮಲ್ಲಿಕಾರ್ಜುನ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ಮಂತ್ರಾಲಯದ ದರ್ಶನಕ್ಕೆ ಸಧ್ಯ ಬಾರದಂತೆ ಮನವಿ ಮಾಡಿಕೊಂಡಿದ್ದಾರೆ.
ವೈರಸ್ ತನ್ನ ಕಂಬಂಧ ಬಾಹುವನ್ನ ಹೆಚ್ಚಿಗೆ ಮಾಡುತ್ತಿದ್ದು, ಸಾರ್ವಜನಿಕರು ತಾವು ಇದ್ದಲ್ಲಿಯೇ ಗುರುವಿನ ಸ್ಮರಣೆ ಮಾಡಬೇಕೆಂದು ಕೋರಲಾಗಿದೆ. ಸಾವಿರಾರೂ ಜನ ಒಂದೇ ಕಡೆ ಕೂಡಿದರೇ ರೋಗ ಉಲ್ಬಣವಾಗುವ ಸಾಧ್ಯತೆಯಿರತ್ತೆ. ಹಾಗಾಗಿ ಭಕ್ತಾಧಿಗಳು ಸಧ್ಯ ಈ ಕ್ಷೇತ್ರಗಳಿಗೆ ಬರುವುದು ಬೇಡ ಎಂದು ವಿನಂತಿಸಲಾಗಿದೆ.