ಜ್ಯೋತಿಯ ರೂಪ ಭಗವಂತ: ಶ್ರೀ ಮೂಜಗು

ಹುಬ್ಬಳ್ಳಿ: ಪ್ರಪಂಚವನ್ನ ತಲ್ಲಣಗೊಳಿಸಿದ ಕೊರೋನಾ ವೈರಸ್ ವಿರುದ್ಧ ಹೋರಾಡಲು ಮುಂದಾಗಬೇಕಿದೆ. ದೀಪ ಹಚ್ಚುವ ಮೂಲಕ ವೈರಸ್ ವಿರುದ್ಧ ಹೋರಾಡೋಣ ಎಂದು ಮೂರುಸಾವಿರ ಮಠದ ಶ್ರೀ ಗುರುಶಿದ್ಧ ರಾಜಯೋಗಿಂದ್ರ ಮಹಾಸ್ವಾಮಿಗಳು ಹೇಳಿದ್ದಾರೆ.
ಇಂದು ಪ್ರಧಾನಿ ಮೋದಿ ಅವರು, ದೀಪವನ್ನ ಹಚ್ಚಲು ಹೇಳಿದ್ದಾರೆ. ಅದನ್ನ ಎಲ್ಲರೂ ಕೂಡಿಕೊಂಡು ಮಾಡೋಣ. ಈ ಮೂಲಕ ಭಗವಂತನಿಗೆ ನಮನ ಸಲ್ಲಿಸೋಣ ಎಂದು ನುಡಿದರು.