ಮೊಲ ಬೇಟೆಯಾಡುತ್ತಿದ್ದ ಮೂವರ ಬಂಧನ

ಕಲಬುರಗಿ: ಕೊರೋನಾ ವೈರಸ್ ನಿಂದ ಕಂಗೆಟ್ಟಿರುವ ಕಲಬುರಗಿ ಜಿಲ್ಲೆಯಾಧ್ಯಂತ ಆತಂಕಿ ಈಗಲೂ ಮನೆ ಮಾಡಿದೆ. ಇಂತಹದೇ ಸ್ಥಿತಿಯನ್ನ ಉಪಯೋಗಿಸಿಕೊಂಡು ಮೊಲದ ಬೇಟೆಯಲ್ಲಿ ತೊಡಗಿದ್ದ ಮೂವರನ್ನ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಲಬುರಗಿಯ ಸಿಂದಗಿ ಬಳಿ ಮೊಲದ ಬೇಟೆಯಾಡುತ್ತಿದ್ದ ಅರ್ಜುನ ಪವಾರ್, ರಾಜು ಪವಾರ್ ಮತ್ತು ಶಿವಾಜಿ ಕಾಳೆ ಬಂಧಿತರು. ಆರೋಪಿಗಳಿಂದ ಮೊಲದ ಹತ್ಯೆಗೆ ಬಳಸುತ್ತಿದ್ದ ಆಯುಧಗಳು ಹಾಗೂ ಐದು ಸತ್ತ ಮೊಲಗಳನ್ನ ವಶಪಡಿಸಿಕೊಳ್ಳಲಾಗಿದೆ.