ಪೊಲೀಸ್ ವಾಹನ ಪಲ್ಟಿ: ಐದು ಪೊಲೀಸರಿಗೆ ಗಾಯ

ಕೋಲಾರ: ಕೊರೋನಾ ಲಾಕ್ ಡೌನ್ ಕರ್ತವ್ಯಕ್ಕೆ ಹಾಜರಾಗಲು ಹೊರಟಿದ್ದ ಪೊಲೀಸ್ ವಾಹನ ತಾಲೂಕಿನ ಅರಿನಾಗನಹಳ್ಳಿ ಬಳಿ ಪಲ್ಟಿಯಾದ ಪರಿಣಾಮ ಐವರು ಪೊಲೀಸರಿಗೆ ಗಾಯವಾದ ಘಟನೆ ನಡೆದಿದೆ.
ಕೋಲಾರ-ಶ್ರೀನಿವಾಸಪುರ ಮಾರ್ಗ ಮಧ್ಯದಲ್ಲಿರುವ ಗ್ರಾಮದ ಬಳಿ ಚಾಲಕ ಸೇರಿ ಐವರು ಪೇದೆಗಳು ಪ್ರಯಾಣ ಮಾಡುತ್ತಿದ್ದರು. ತಾಂತ್ರಿಕ ದೋಷದಿಂದ ವಾಹನ ಪಲ್ಟಿಯಾಗಿದ್ದು, ಮಂಜುನಾಥ, ವೇಣು ಸೇರಿದಂತೆ ಐವರನ್ನೂ ಜಾಲಪ್ಪ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾಕ್ ಡೌನ್ ಹಿನ್ನೆಲೆಯಲ್ಲಿ ಶ್ರೀನಿವಾಸಪುರಕ್ಕೆ ಹೊರಟಿದ್ದ ಪೇದೆಗಳು. ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.