ನಂಗೆ ಮುಸ್ಲಿಂ ವೈಧ್ಯರೇ ಜೀವ ಉಳಿಸಿದ್ದು: ಎಸಿಪಿ ಅನುಷಾ

ಧಾರವಾಡ: ಜಿ.ಅನುಷಾ ಧಾರವಾಡ ನಗರದ ಎಸಿಪಿಯಾಗಿ ಇತ್ತೀಚೆಗೆ ಅಧಿಕಾರ ಸ್ವೀಕರಿಸಿದ್ದಾರೆ.. ಇದಕ್ಕಿಂತ ಪೂರ್ವದಲ್ಲಿ ಇವರು ಮೊದಲು ಪಿಎಸೈ ಆಗಿ ಕಾರ್ಯನಿರ್ವಹಣೆ ಮಾಡುತ್ತಲೇ ಕೆಪಿಎಸ್ಸಿ ಪರೀಕ್ಷೆ ಬರೆದು ಡಿವೈಎಸ್ಪಿಯಾಗಿದ್ದರು.. ಅನುಷಾ ಜಿ ಅವರು ಬ್ಲ್ಯಾಕ್ ಬೆಲ್ಟ್ ಪ್ರವೀಣೆ.. ಹಿರಿಯ ಐಪಿಎಸ್ ಅಧಿಕಾರಿ ಸೋನಿಯಾ ನಾರಂಗ್ ಇವರಿಗೆ ಪ್ರೇರಣೆ.. ಕೆ.ಎಸ್.ಗಣೇಶ ಮತ್ತು ಕುಸುಮಾ ಅವರ ಮಗಳು ಅನುಷಾ.. ಮೊದಲಿಂದಲೂ ಜಾಣೆಯಾಗಿದ್ದ ಅನುಷಾ ಅವರು 8 ಗೋಲ್ಡ್ ಮೆಡಲ್ ಪಡೆದವರಾಗಿದ್ದಾರೆ.
ಧಾರವಾಡದ ಅಂಜುಮನ್ ಸಂಸ್ಥೆಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ನಂಗೆ ಮೊದಲು ಜೀವ ಕೊಟ್ಟಿದ್ದು ತಾಯಿಯಾದರೇ, ಎರಡನೇಯ ಜೀವ ಕೊಟ್ಟಿದ್ದು ಮುಸ್ಲಿಂ ವೈಧ್ಯ. 2002ರಲ್ಲಿ ಗೋದ್ರಾ ರೇಲ್ವೆ ದುರಂತ ನಡೆದಾಗ ಯಾವುದೇ ಆಸ್ಪತ್ರೆಗೆ ತೆಗೆದಿರಲಿಲ್ಲ, ಆಗ ನನ್ನ ಬದುಕಿಸಿದ್ದೇ ಡಾ.ಸಯ್ಯದ ಸಾಧೀಕ. ಗೋದ್ರಾ ಘಟನೆಯಲ್ಲಿ ಜೀವ ಕಳೆದುಕೊಳ್ಳಬೇಕಿದ್ದ ನನ್ನ ಮುಸ್ಲಿಂ ವೈಧ್ಯರು ಬದುಕಿಸಿದ್ದರು.. ನಾನು ನಿಮ್ಮ ಮನೆಯ ಮಗಳು, ಮುಸ್ಲಿಂ ನಾಯಕರಿಗೆ ಭರವಸೆ ನೀಡಿದ ಎಸಿಪಿ ಅನುಷಾ.
ಅಂಜುಮನ್ ಸಂಸ್ಥೆಯಲ್ಲಿ ನಡೆದ ಸಭೆಯಲ್ಲಿ ತಮ್ಮ ಬದುಕನ್ನ ತೆರೆದಿಟ್ಟ ಎಸಿಪಿ.. ಕೆಲವರು ಚಂಚಲ ಮನಸ್ಸಿನವರು ಇರುತ್ತಾರೆ.. ಅದು ಅವರ ತಪ್ಪಲ್ಲ, ಅದು ವಯಸ್ಸಿನ ತಪ್ಪು.. ನಮ್ಮ ನಮ್ಮ ಮಧ್ಯದಲ್ಲಿ ಅಂತರ ತರೋದಕ್ಕೆ ಕೆಲವರು ಹಳೇಯ ವೀಡೀಯೋಗಳನ್ನ ಹೊರಗೆ ಬಿಡುತ್ತಾರೆ.. ಅನ್ಯೋನ್ಯವಾಗಿರುವ ಕುಟುಂಬದಲ್ಲಿ ಹುಳಿ ಹಿಂಡೋಕೆ ಬಂದ್ರೇ ಸುಮ್ಮನೆ ಬಿಡುತ್ತೇವಾ.. ಸರಿಯಾಗಿಯೇ ರಿಪೇರಿ ಮಾಡಿ ಕಳಿಸುತ್ತೇವೆ.. ಎರಡು ಕೈ ಸೇರಿದರೇ ಮಾತ್ರ ಚಪ್ಪಾಳೆ, ಒಂದು ಕೈಯಿಂದ ಹೊಡೆಯೋಕೆ ಆಗಲ್ಲವೆಂದರು.