ಕೊರೋನಾ ವೈರಸ್: ಭಯದಿಂದ ಹೊರಗೆ ಬಾರದ ಜನ: ಜಯನಗರದಲ್ಲಿ ನವಿಲುಗಳ ಓಡಾಟ
1 min readಕೋಲಾರ: ಕೊರೋನಾ ವೈರಸ್ ಪ್ರಕರಣದಿಂದ ಜನಸಂದಣಿ ಕಡಿಮೆಯಾಗುತ್ತಿದಂತೆ ನಾಡಿನತ್ತ ಪಕ್ಷಿ-ಪ್ರಾಣಿಗಳು ಬರಲಾರಂಭಿಸಿವೆ. ಇಂದು ಬೆಳ್ಳಂಬೆಳಿಗ್ಗೆ ಇಲ್ಲಿನ ಜಯನಗರದಲ್ಲಿ ನವಿಲುಗಳ ಸದ್ದು ಜನರನ್ನ ಮಂತ್ರಮುಗ್ಧರನ್ನಾಗಿಸಿತು.
ನವಿಲುಗಳನ್ನ ನೋಡಲು ಬೆಟ್ಟ-ಗುಡ್ಡಅಲೆಯುತ್ತಿದ್ದವರಿಗೆ ಇಂದು ಅವುಗಳೇ ಮನೆಯಂಗಳದಲ್ಲಿ ಕಂಡು ಬಂದಿದ್ದು ಆಶ್ಚರ್ಯ ಮೂಡಿಸಿತ್ತು. ಹಲವು ನವಿಲುಗಳು ಬಡಾವಣೆಯಲ್ಲಿ ಹಾರಾಟ ನಡೆಸಿದ್ದು, ಪ್ರತಿಯೊಬ್ಬರಲ್ಲೂ ಪುಳಕ ಮೂಡಿಸಿತು.