ಎಐಸಿಸಿಯಿಂದ ಸುಲೇಮಾನ ನಾಶಿಪುಡಿ ನೇಮಕ: ಯುವಕರಿಗೆ ಪ್ರಾಧ್ಯಾನತೆ

ಬೆಂಗಳೂರು: ಕೊರೋನಾ ವೈರಸ್ ಎದುರಿಸಲು ಮತ್ತೂ ಸಂಕಷ್ಟ ಕಾಲದಲ್ಲಿ ಜನರ ಸಮಸ್ಯೆ ಅರಿಯಲು ಎಐಸಿಸಿ ಬೆಳಗಾವಿ ವಿಭಾಗದ ಟೀಂ ರಚನೆ ಮಾಡಿದ್ದು, ನವಲಗುಂದ ಪಟ್ಟಣದ ಉತ್ಸಾಹಿ ಸುಲೇಮಾನ ನಾಶಿಪುಡಿ ಅವರನ್ನ ನೇಮಕ ಮಾಡಿದೆ.
ಇಮ್ರಾನ್ ಕಳ್ಳಿಮನಿ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ತಂಡದಲ್ಲಿ ಸುಲೇಮಾನ ನಾಶಿಪುಡಿ ಕೂಡಾ ಇದ್ದು, ಜಿಲ್ಲೆಯ ಆಗುಹೋಗು ಗಳ ಬಗ್ಗೆ ಮಾಹಿತಿ ನೀಡಬೇಕಿದೆ.
ಅಲ್ಪಸಂಖ್ಯಾತ ವಿಭಾಗದಲ್ಲಿ ಇಂತಹದೊಂದು ಸ್ಥಾನ ನವಲಗುಂದ ಪಟ್ಟಣಕ್ಕೆ ಸಿಕ್ಕಿರುವುದು ಇದೇ ಮೊದಲು. ಕಾಂಗ್ರೆಸ್ ಪಕ್ಷದಲ್ಲಿ ಕಾರ್ಯಕರ್ತನಾಗಿದ್ದ ಸುಲೇಮಾನ ನಾಶಿಪುಡಿ ಆಯ್ಕೆಯನ್ನ ಯುವ ಕಾಂಗ್ರೆಸ್ ಅಧ್ಯಕ್ಷ ವಿನೋದ ಅಸೂಟಿ ಸ್ವಾಗತಿಸಿದ್ದಾರೆ.