ಉಗಳಿದರೇ ದಂಡ ಪಡೆಯಲು ಮುಂದಾದ ತುಮಕೂರು ಪಾಲಿಕೆ
        ತುಮಕೂರು: ಲಾಕ್ ಡೌನ್ ನಿಯಮದ ಅಸಡ್ಡೆ ತೋರಿದವರ ಮೇಲೆ ದಂಡ ಹಾಕಲು ಮಹಾನಗರ ಪಾಲಿಕೆ ಮುಂದಾಗಿದ್ದು, ಸಾರ್ವಜನಿಕ ಪ್ರದೇಶದಲ್ಲಿ ಉಗುಳಿದರೇ ದಂಡ ಹಾಕಲು ಮುಂದಾಗಿದೆ.
ಸಾರ್ವಜನಿಕ ಪ್ರದೇಶದಲ್ಲಿ ಮೊದಲ ಬಾರಿಗೆ ಉಗುಳಿದರೇ 500ದಂಡ, ನಂತರ 1000 ದಂಡ ಹಾಕಲು ಆದೇಶ ಮಾಡಲಾಗಿದೆ. ಅಷ್ಟೇ ಅಲ್ಲ, ಮಾಸ್ಕ್ ಹಾಕದೇ ಸಾರ್ವಜನಿಕ ಪ್ರದೇಶದಲ್ಲಿ ಬಂದರೇ 100 ರೂಪಾಯಿ, ನಂತರ 200 ರೂಪಾಯಿ ದಂಡ ಹಾಕುವುದಾಗಿ ಆದೇಶ ಮಾಡಿದ್ದಾರೆ.
ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆಯಡಿ ಕೇಂದ್ರ ಗೃಹ ಸಚಿವಾಲಯದ ಸೂಚನೆಯ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ ಆಯುಕ್ತ ಭೂಬಾಲನ್ ಈ ಸೂಚನೆ ಹೊರಡಿಸಿದ್ದಾರೆ.
                      
                      
                      
                      
                      