ಪಾದರಾಯನಪುರ ಗಲಾಟೆ: 141 ಆಪಾದಿತರು ರಾಮನಗರ ಜೈಲಿಗೆ

ಬೆಂಗಳೂರು: ಕ್ವಾರಂಟೈನ್ ಇರುವಂತೆ ನಿರ್ಬಂಧ ಹಾಕಿದ್ದವರು ಗಲಾಟೆ ಮಾಡಿದ ಪ್ರಕರಣ ರಾಜ್ಯದಲ್ಲಿಯೇ ಅತಿಯಾದ ಸುದ್ದಿಯನ್ನ ಮಾಡಿತ್ತು. ಇದೀಗ ಈ ಪ್ರಕರಣದಲ್ಲಿ 141 ಜನರನ್ನ ಬಂಧನ ಮಾಡಲಾಗಿದ್ದು, ಮುಂಜಾಗೃತಾ ಕ್ರಮವಾಗಿ ಅವರೆಲ್ಲರನ್ನೂ ರಾಮನಗರ ಜೈಲಿಗೆ ಶಿಪ್ಟ್ ಮಾಡಲು ಪೊಲೀಸ್ ಇಲಾಖೆ ತೀರ್ಮಾನಿಸಿದೆ.
ಪಾದರಾಯನಪುರದಲ್ಲಿ ಇದೀಗ ಪರಿಸ್ಥಿತಿ ಹತೋಟಿಯಲ್ಲಿದ್ದು, ಪೊಲೀಸ್ ಕೋಟೆ ನಿರ್ಮಾಣ ಮಾಡಲಾಗಿದೆ. ಮನೆಯಿಂದ ಒಬ್ಬೇ ಒಬ್ಬರಿಗೆ ಹೊರಗೆ ಬರಲು ಅವಕಾಶ ನೀಡಲಾಗಿದ್ದು, ದಿನಸಿ ತರಲು ಮಾತ್ರ ಅವಕಾಶ ನೀಡಲಾಗಿದೆ. ಮೊನ್ನೆಯ ಗಲಾಟೆಯನ್ನ ಅನೇಕರು ಅನೇಕ ರೀತಿಯಲ್ಲಿ ವ್ಯಾಖ್ಯಾನ ಮಾಡಿದ್ದರಿಂದ ಗೊಂದಲು ಮತ್ತಷ್ಟು ಹೆಚ್ಚಾಗಿತ್ತು. ಇದೀಗ ಪರಿಸ್ಥಿತಿ ಹತೋಟಿಯಲ್ಲಿದೆ.