ಪೊಲೀಸರ ಭರ್ಜರಿ ಕಾರ್ಯಾಚರಣೆಗೆ 10ಲಕ್ಷ ಮೌಲ್ಯದ ಕಳ್ಳಭಟ್ಟಿ ನಾಶ

ಹಾವೇರಿ: ಮಧ್ಯ ಮಾರಾಟ ನಿಷೇಧವಾದ ಮೇಲೆ ಕಳ್ಳಭಟ್ಟಿ ಪ್ರಕರಣಗಳು ದಿನೇ ದಿನೇ ಹೆಚ್ಚು ಕಂಡು ಬರುತ್ತಿದ್ದು, ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಹುಲಗಿನಕೊಪ್ಪ ಬಳಿ ನಡೆದ ದಾಳಿ ರಾಜ್ಯದಲ್ಲಿಯೇ ದೊಡ್ಡ ದಾಳಿಯಾಗಿದ್ದು, 10 ಮೌಲ್ಯದ ಕಳ್ಳಭಟ್ಟಿ ಪತ್ತೆ ಹಚ್ಚಿ ಅದೇಲ್ಲವನ್ನೂ ಅಲ್ಲಿಯೇ ನಾಶ ಮಾಡಲಾಗಿದೆ.
ಮಧ್ಯ ಸಿಗದ ಅನೇಕರು ಕಳ್ಳಭಟ್ಟಿಗೆ ಮಾರು ಹೋಗುತ್ತಿದ್ದಾರೆಂಬ ಮಾಹಿತಿ ಆಧರಿಸಿ ತನಿಖೆಗಿಳಿದ ಪೊಲೀಸರಿಗೆ ಈ ಬೃಹತ್ ಜಾಲ ಪತ್ತೆಯಾಗಿದೆ. ಹುಲಗಿನಕೊಪ್ಪ ಗ್ರಾಮವೂ ಸೇರಿದಂತೆ ಅಕ್ಕಪಕ್ಕದ ಗ್ರಾಮದಲ್ಲಿ ನಿರಂತರವಾಗಿ ಭಟ್ಟಿ ಸೆರೆ ತೆಗೆಯುತ್ತಿದ್ದರು. ಇದರ ಜಾಡು ಹಿಡಿದ ಇನ್ಸಪೆಕ್ಟರ್ ಚಿದಾನಂದ, ಕೊನೆಗೂ ದಡ ತಲುಪಿದ್ದಾರೆ.
ಅಕ್ರಮದಲ್ಲಿ ತೊಡಗಿದ್ದು ಬಹುತೇಕರು ಪರಾರಿಯಾಗಿದ್ದು. ಅವರ ಪತ್ತೆಗಾಗಿ ಪೊಲೀಸರು ಜಾಲ ಬೀಸಿದ್ದಾರೆ.