ಲಾಕ್ ಡೌನ್ ನಡುವೆಯೂ ನಿಲ್ಲದ ಅಕ್ಕಿ ಕಳ್ಳತನ: ಇಬ್ಬರ ಬಂಧಿಸಿದ ಪೊಲೀಸರು

ಕಲಬುರಗಿ: ಲಾಕ್ ಡೌನ್ ನಡುವೆಯೂ ಜಾಲಾಕಿತನದಿಂದ ಅಕ್ಕಿ ಕಳ್ಳತನ ಮಾಡುತ್ತಿದ್ದ ಇಬ್ಬರನ್ನ ಜೇವರ್ಗಿ ಠಾಣೆ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
21ಟನ್ ಅಕ್ಕಿಯನ್ನ 430 ಚೀಲದಲ್ಲಿ ತುಂಬಿದ್ದ ಖದೀಮರು ವಾಹನಕ್ಕೆ ವಿಶೇಷ ಪರವಾನಿಗೆಯ ಪತ್ರ ಲಗತ್ತಿಸಿ ರವಾನೆ ಮಾಡುತ್ತಿದ್ದರು. ಯಾವುದೇ ಅಧಿಕೃತ ಗೋಡೌನ್ ಗೆ ಹೋಗದ ಅಕ್ಕಿಯನ್ನ ಕಾಳಸಂತೆಯಲ್ಲಿ ಮಾರಾಟ ಮಾಡುವ ಯತ್ನ ನಡೆದಿತ್ತು. ಇಬ್ಬರನ್ನ ಶಹಾಪೂರ-ಕಲಬುರಗಿ ಹೆದ್ದಾರಿಯ ಮೂಡಬಾಳ ಕ್ರಾಸ್ ಬಳಿ ಬಂಧಿಸಿರುವ ಪೊಲೀಸರು, ಇವರ ಹಿನ್ನೆಲೆಯ ಬಗ್ಗೆ ತನಿಖೆ ಆರಂಭಿಸಿದ್ದಾರೆ.