ಸೋಮವಾರದಿಂದ ಧಾರವಾಡ ಜಿಲ್ಲೆಯ ಬಹುತೇಕ ವ್ಯಾಪಾರ-ವಹಿವಾಟು ಆರಂಭ

ಧಾರವಾಡ: ಜಿಲ್ಲೆಯ ಬಹುತೇಕ ತಾಲೂಕು ಪ್ರದೇಶಗಳಲ್ಲಿ ಹಲವು ರೀತಿಯ ವ್ಯಾಪಾರ ವಹಿವಾಟು ನಡೆಸಲು ಜಿಲ್ಲಾಡಳಿತ ಆದೇಶ ನೀಡಿದ್ದು, ಹುಬ್ಬಳ್ಳಿ ಶಹರಕ್ಕೆ ಈ ಆದೇಶ ಅನ್ವಯವಾಗುವುದಿಲ್ಲವೆಂದು ಹೇಳಿದೆ.
ಜಿಲ್ಲೆಯ ನವಲಗುಂದ, ಕಲಘಟಗಿ, ಅಳ್ನಾವರ, ಕುಂದಗೋಳ ಹಾಗೂ ಧಾರವಾಡ ಶಹರದಲ್ಲಿ ಸೋಮವಾರದಿಂದ ಗುರುವಾರದವರೆಗೆ ಮುಂಜಾನೆ 10ರಿಂದ ಸಂಜೆ 5ರ ವರೆಗೆ ವ್ಯಾಪಾರ-ವಹಿವಾಟು ನಡೆಸಲು ಆದೇಶ ನೀಡಲಾಗಿದೆ. ಈ ಹಂತದಲ್ಲಿ ಸೋಷಿಯಲ್ ಡಿಸ್ಟನ್ಸ್ ಮೆಂಟೇನ್ ಮಾಡಬೇಕೆಂದು ಕೂಡ ಸೂಚನೆ ನೀಡಲಾಗಿದೆ.