ಭಟ್ಕಳದಲ್ಲಿ 22ಜನರ ಸಾವು: ಸದ್ದಿಲ್ಲದೇ ದಫನ್ ಮಾಡಿದ್ದಾರಾ: ಸಂಸದ ಅನಂತಕುಮಾರ ಪ್ರಶ್ನೆ

ಉತ್ತರಕನ್ನಡ: ಲಾಕ್ ಡೌನ್ ಬಳಿಕ ಭಟ್ಕಳದಲ್ಲಿ 22 ಜನ್ರು ಸಾವನ್ನಪ್ಪಿದ್ದಾರೆ. ಸದ್ದಿಲ್ಲದೆ ಎಲ್ಲರನ್ನು ದಪನ್ ಮಾಡಲಾಗಿದೆ. ನಿಗೂಢವಾಗಿ ಸಾವನ್ನಪ್ಪಿದವರ ಬಗ್ಗೆ ಸಮಗ್ರ ತನಿಖೆ ಆಗಬೇಕಿದೆ. ಸತ್ತರವ ಬಗ್ಗೆ ಆರೋಗ್ಯ ಇಲಾಖೆಗೆ ಮಾಹಿತಿ ನೀಡಿಲ್ಲ. ಈ ಇವರ ಸಾವಿನ ಕಾರಣದ ಬಗ್ಗೆ ಸಮಗ್ರ ತನಿಖೆ ಆಗಬೇಕು. ಸತ್ತವರ ಮಾಹಿತಿ ನೀಡುವಂತೆ ಡಿಸಿಗೆ ಸಂಸದ ಅನಂತಕುಮಾರ ಹೆಗಡೆ ಸೂಚನೆ ನೀಡಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದು, ಭಟ್ಕಳಕ್ಕೆ ಭೇಟಿ ನೀಡಿದ ವೇಳೆ ವೀಡಿಯೋ ಕಾನ್ಫರೆನ್ಸ್ ನಡೆಸಿ ಸಂಸದ ಅನಂತಕುಮಾರ ಹೆಗಡೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಅನಂತಕುಮಾರ ಸೂಚನೆ ಕೇಳಿ ಬೆಚ್ಚಿ ಬಿದ್ದ ಉತ್ತರಕನ್ನಡ ಜನತೆ. ಹೊಸ ಬಾಂಬ್ ಹಾಕಿದ್ರಾ ಸಂಸದ ಅನಂತಕುಮಾರ ಹೆಗಡೆ.