ಮತ್ತೆ ಸರಕಾರದ ವಿರುದ್ಧ ತಿರುಗಿಬಿದ್ದ ಬಿಜೆಪಿ ಶಾಸಕ: ಚಪ್ಪಲಿ ತುಗೊಂಡು ಹೊಡ್ಕೋಬೇಕು ಅನಿಸ್ತಿದೆಯಂತೆ
1 min readಧಾರವಾಡ: ಬಿಜೆಪಿ ಸರಕಾರದ ವಿರುದ್ಧವೇ ತಿರುಗಿ ಬಿದ್ದಿರುವ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಮತಕ್ಷೇತ್ರದ ಬಿಜೆಪಿ ಶಾಸಕ ಅರವಿಂದ ಬೆಲ್ಲದ, ದೇಶಾದ್ಯಂತ ಮದ್ಯಪಾನ ನಿಷೇಧ ಮಾಡಬೇಕೆಂದು ಆಗ್ರಹಿಸಿದ್ದಾರೆ.
ವಿರೇಂದ್ರ ಹೆಗ್ಗಡೆ ಸೇರಿದಂತೆ ಹಲವಾರು ಸ್ವಾಮೀಜಿಗಳ ಹಾಗೂ ಹಲವಾರು ಮುಖಂಡರ ಜೊತೆಗೆ ಚರ್ಚೆ ಮಾಡಿದ್ದೇನೆ. ಇಂತಹ ಒಂದು ವಿಭಿನ್ನ ರೀತಿಯ ಜಾಗೃತಿಗೆ ನಾನು ವೇದಿಕೆ ಕಲ್ಪಿಸುತ್ತಿದ್ದೇನೆ. ಸಮಾಜದಲ್ಲಿ ಈ ಬಗ್ಗೆ ಚರ್ಚೆ ನಡೆಯಲಿ ಎಂದಿದ್ದಾರೆ.
ಮದ್ಯದ ಅಂಗಡಿ ಮುಂದೆ ಸಾಲು ನೋಡಿದ್ರೆ ನಗಬೇಕೊ ಅಥವಾ ಅಳಬೇಕೊ ಅಥವಾ ನಮ್ಮ ಚಪ್ಪಲಿ ತೊಗೊಂಡು ಹೊಡ್ಕೋಬೇಕು ಗೊತ್ತಾಗುತ್ತಿಲ್ಲ. ಜನರು ಉದ್ಯೋಗಾವಕಾಶಕ್ಕೆ ಸಾಲು ನಿಲ್ಲುವ ಬದಲು ಮದ್ಯ ಖರೀದಿಗೆ ಸಾಲಾಗಿ ನಿಲ್ಲಬೇಕಾಗಿದೆ. ಮದ್ಯ ಮಾರಾಟ ಸರ್ಕಾರಕ್ಕೆ ರೆವಿನ್ಯು ಕೊಡುತ್ತದೆ ಅನ್ನೋದು ಹಲವು ರಾಜ್ಯದ ಸರ್ಕಾರಗಳ ಅನಿಸಿಕೆ. ೪೫ ದಿನದಿಂದ ಹುಬ್ಬಳ್ಳಿ ಧಾರವಾಡ ಶಾಂತವಾಗಿತ್ತು. ಆದ್ರೆ ಇದೀಗ ಹಲವು ಕಡೆ ಅಪಘಾತ ಹಾಗೂ ಹೊಡೆದಾಟ ಆರಂಭವಾಗಿವೆ ಎಂದು ಹೇಳಿದ್ದಾರೆ.
ಒಂದೆ ರಾಜ್ಯ ಈ ಬಗ್ಗೆ ವಿಚಾರ ಮಾಡಿದರೆ ನಡೆಯಲ್ಲ, ಎಲ್ಲ ರಾಜ್ಯಗಳು ವಿಚಾರ ಮಾಡಬೇಕು. ದೇಶಾದ್ಯಂತ ಈ ಬಗ್ಗೆ ವಿಚಾರ ಮಾಡಬೇಕು, ನಮ್ಮ ರಾಜ್ಯದ ಸಿಎಂ ಯಡಿಯೂರಪ್ಪ ಅವರು ಮದ್ಯಪಾನ ವಿರೋಧಿಯಾಗಿದ್ದಾರೆ. ಅವರು ಕೇವಲ ಜನರ ಹಿತಕ್ಕಾಗಿ ಕೆಲಸ ಮಾಡಿದ್ದಾರೆ, ಅವರಿಗೆ ಕೂಡಾ ಮದ್ಯ ಆರಂಭ ಮಾಡಿದ್ದರ ಬಗ್ಗೆ ಕಾಳಜಿ ಇಲ್ಲ. ಮದ್ಯ ನಿಷೇಧ ಮಾಡಬೇಕು ಎನ್ನುವದು ನನ್ನ ವೈಯಕ್ತಿಕ ಅನಿಸಿಕೆ ಎಂದು ಅರವಿಂದ ಬೆಲ್ಲದ ಹೇಳಿದ್ದಾರೆ.