ಕುಡಿದ ಅಮಲಿನಲ್ಲಿ ತಮ್ಮ ಕೈ ಕಟ್: ನಶೆಯಿಂದ ಹೆಚ್ಚಾಗುತ್ತಿವೆ ಅಪರಾಧ ಪ್ರಕರಣಗಳು

ಚಿಕ್ಕಬಳ್ಳಾಪುರ: ಮದ್ಯದ ಅಮಲಿನಲ್ಲಿ ಜಗಳ ಶುರು ಮಾಡಿದ ಪರಿಣಾಮ ತಮ್ಮನ ಕೈಯನ್ನ ಅಣ್ಣನೋರ್ವ ಕತ್ತರಿಸಿದ ಘಟನೆ ಗೌರಿಬಿದನೂರು ತಾಲೂಕಿನ ರಮಾಪುರ ಗ್ರಾಮದಲ್ಲಿ ಸಂಭವಿಸಿದೆ.
ಮದ್ಯದ ಅಮಲಿನಲ್ಲಿ ಅಣ್ಣ ತಮ್ಮದಿಂರ ನಡುವೆ ಜಗಳ ಆರಂಭವಾಗಿದೆ. ಇದೇ ಸಮಯದಲ್ಲಿ ಕೃಷ್ಣಪ್ಪ ಮಚ್ಚಿನಲ್ಲಿ ತಮ್ಮನಾದ ಹನಮಂತರಾಯನ ಕೈಯನ್ನ ಕತ್ತರಿಸಿದ್ದಾನೆ.
ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ತಮ್ಮನನ್ನ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಅಣ್ಣ ಕೃಷ್ಣಪ್ಪ ಪರಾರಿಯಾಗಿದ್ದು, ಗೌರಿಬಿದನೂರು ಗ್ರಾಮಾಂತರ ಠಾಣೆ ಪೊಲೀಸರು ಆರೋಪಿಗಾಗಿ ಶೋಧ ಆರಂಭಿಸಿದ್ದಾರೆ.