ಕೊವೀಡ್- 19 ಗೆ ಪ್ಲಾಸ್ಮಾ ಟ್ರಿಟ್‌ಮೆಂಟ್‌ಗೆ ಕಿಮ್ಸ್‌ಗೆ ಪರವಾನಿಗೆ: ಹೆಚ್ಚಿದ ಕಿಮ್ಸ್ ಗೌರವ

ಹುಬ್ಬಳ್ಳಿ: ದೇಶದಲ್ಲಿ ಪ್ಲಾಸ್ಮಾ ಟ್ರಿಟಮೆಂಟಿನಿಂದ ಕೊರೋನಾ ಪಾಸಿಟಿವ್ ಪ್ರಕರಣಗಳು ಗುಣಮುಖರಾಗುತ್ತಿದ್ದಂತೆ ಆ ಚಿಕಿತ್ಸೆ ನೀಡಲು ನಾ ಮುಂದು ತಾ ಮುಂದು ಎನ್ನುವಂತೆ ನೂರಾರೂ ಆಸ್ಪತ್ರೆಗಳು ಬೇಡಿಕೆಯಿಟ್ಟಿದ್ದವು. ಆದರೆ, ಕರ್ನಾಟಕದಲ್ಲಿ ಉತ್ತರ ಕರ್ನಾಟಕದ ಹೆಮ್ಮೆಯ ಕಿಮ್ಸ್ ಗೆ ಈ ಅವಕಾಶ ದೊರೆತಿದೆ.
ICMR ನಿಂದ ಪರವಾನಿಗೆ ಪಡೆದ ಕರ್ನಾಟಕದ ಮೊದಲ ಆಸ್ಪತ್ರೆ ಇದಾಗಿದೆ. ಧಾರವಾಡ ಜಿಲ್ಲೆಯಲ್ಲಿ ಈಗಾಗಲೇ 12 ಪಾಸಿಟಿವ್ ಪ್ರಕರಣಗಳು ಬಂದಿದ್ದವು. ಅವುಗಳನ್ನ ಸಮರ್ಥವಾಗಿ ನಿಭಾಯಿಸಿರುವ ಕಿಮ್ಸ್ ವೈದ್ಯ ಸಮೂಹ, ಪ್ಲಾಸ್ಮಾ ಚಿಕಿತ್ಸೆ ನೀಡಲು ಉತ್ಸುಕವಾಗಿದೆ. ಧಾರವಾಡ ಜಿಲ್ಲೆಯಲ್ಲಿ 12 ಪಾಸಿಟಿವ್‌ಗಳಲ್ಲಿ 7 ವ್ಯಕ್ತಿಗಳು ಗುಣಮುಖರಾಗಿದ್ದು, ಇನ್ನುಳಿದವರಿಗೂ ಚಿಕಿತ್ಸೆ ಮುಂದುವರೆದಿದೆ. ಈಗ ಪ್ಲಾಸ್ಮಾ ಟ್ರಿಟ್‌ಮೆಂಟ್‌ಗೂ ಅವಕಾಶ ಪಡೆದ ಕೀರ್ತಿ ಕಿಮ್ಸ್‌ಗೆ ದೊರೆತಿದೆ.