ಕಳಫೆ ಪಡಿತರ ವಿತರಣೆ ಮಾಡಿದ್ರೇ ಕ್ರಿಮಿನಲ್ ಮೊಕದ್ದಮೆ: ಸಚಿವ ಗೋಪಾಲಯ್ಯ ಎಚ್ಚರಿಕೆ
        ತುಮಕೂರು: ಕೆಲವೆಡೆ ಕಳಪೆ ಬೇಳೆ ಬಂದಿದೆ ಅದನ್ನ ಜನ್ರಿಗೆ ವಿತರಣೆ ಮಾಡಬಾರದು. ಕಳಪೆ ಬೇಳೆಯನ್ನ ಸರಬರಾಜು ಮಾಡಿದವ್ರ ವಿರುದ್ದ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಸಚಿವ ಗೋಪಾಲಯ್ಯ ಹೇಳಿದ್ದಾರೆ.
ಪಡಿತರದಲ್ಲಿ ಕಳಪೆಮಟ್ಟದ ಬೇಳೆ ವಿತರಣೆ ವಿಚಾರವಾಗಿ ತುಮಕೂರಿನ ಬುಗುಡನಹಳ್ಳಿಯಲ್ಲಿ ಆಹಾರ ಸಚಿವ ಗೋಪಾಲಯ್ಯ ಹೇಳಿಕೆ ನೀಡಿದ್ದು, ಈಗಾಗಲೇ ಕೆಳಮಟ್ಟದ ಬೇಳೆ ಕೊಟ್ಟವರ ಮೇಲೆ ರಾಯಚೂರಿನಲ್ಲಿ ಕೇಸ್ ದಾಖಲಿಸಲಾಗಿದೆ. ಅಂತಹ ಗುತ್ತಿಗೆದಾರರನ್ನ ಬ್ಲಾಕ್ ಲಿಸ್ಟ್ ಮಾಡಲು ಈಗಾಗಲೇ ಸೂಚಿಸಿದ್ದೇನೆ. ಕಳಪೆ ಮಟ್ಟದ ಬೇಳೆ ಬಂದಲ್ಲಿ ರೇಷನ್ ಅಂಗಡಿಯವ್ರು ಕೂಡಲೇ ಜಿಲ್ಲಾಧಿಕಾರಿಗೆ ಮಾಹಿತಿ ನೀಡಿ. 24 ಗಂಟೆಗಳಲ್ಲಿ ಗುತ್ತಿಗೆದಾರರ ಬದಲಾವಣೆ ಮಾಡಿ,ಅವ್ರ ವಿರುದ್ದ ಕ್ರಮ ಕೈಗೊಳ್ಳಲಾಗುವುದೆಂದು ಆಹಾರ ಮತ್ತು ನಾಗರೀಕ ಸಚಿವ ಗೋಪಾಲಯ್ಯ ಹೇಳಿದ್ದಾರೆ.
                      
                      
                      
                      
                      