ಕೋತಿಗಾಗಿ ಕಣ್ಣೀರಿಟ್ಟ ಗೂಳಿ: ಮೂಖ ಪ್ರಾಣಿಯ ಮೂಖ ರೋಧನೆ

ಚಿಕ್ಕೋಡಿ: ಸತ್ತ ಕೋತಿಗೆ ಕಣ್ಣಿರಿಟ್ಟು ಅಂತಿಮ ವಿಧಾಯ ಹೇಳಿದ ಮೂಖ ಪ್ರಾಣಿ ಗೂಳಿ. ಅಲಂಕರಿಸಿದ ಕೋತಿಯ ಮುಂದೆ ನಿಂತು ಕಣ್ಣಿರು ಹಾಕಿ ಕಾಲಿಗೆ ನಮಿಸಿರುವ ಗೂಳಿಯ ದೃಶ್ಯ ಮನ ಕಲುಕುವಂತಿತ್ತು. ಮೂಖ ಪ್ರಾಣಿಗಳ ಮೂಖರೋದನೆ ಕಂಡು ಜನ ಭಾವುಕರಾದ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ಪಟ್ಟಣದಲ್ಲಿ ನಡೆದಿದೆ.
ವಿದ್ಯುತ್ ತಂತಿ ಸ್ಪರ್ಶಿಸಿ ಕೋತಿ ಸಾವಿಗೀಡಾಗಿದ್ದು, ಸಾವನ್ನಪ್ಪಿರುವ ಕೋತಿಯನ್ನು ಹೂವಿನಿಂದ ಅಲಂಕರಿಸಿ ಕುರ್ಚಿಯ ಮೇಲೆ ಕೂಡಿಸಲಾಗಿತ್ತು, ಇದನ್ನ ನೋಡಿದ ಗೂಳಿ ಅದರ ಬಳಿ ಬಂದು ರೋಧಿಸತೊಡಗಿತು. ಪ್ರಾಣಿಯ ಈ ಭಾವನೆ ಜನರ ಮನಸ್ಸನ್ನ ಮತ್ತಷ್ಟು ರೋಧಿಸುವಂತೆ ಮಾಡಿತು. ಕೆಲ ಸಮಯದ ಬಳಿಗ ಮಂಗನ ಅಂತ್ಯ ಸಂಸ್ಕಾರವನ್ನ ಸಾರ್ವಜನಿಕರು ನೆರವೇರಿಸಿದರು.