ಕ್ವಾರಂಟೈನ್ ಮಾಡಬೇಡಿ ಎಂದ ಗ್ರಾಮಸ್ಥರು: ಪೊಲೀಸರೊಂದಿಗೆ ಮಾತಿನ ಚಕಮಕಿ

ಚಿಕ್ಕೋಡಿ: ಮಜಲಟ್ಟಿ ಗ್ರಾಮದ ವಸತಿ ಶಾಲೆಯಲ್ಲಿ ಕ್ವಾರಂಟೈನ ಮಾಡಬೇಡಿ ಎಂದು ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದು, ಪೊಲೀಸರ ನಡುವೆ ಮಾತಿನ ಚಕಮಕಿಯಾಗಿದೆ.
ಮುಂಬೈನಿಂದ ಬಂದ ಮೂವರು ಕೊರೋನಾ ಶಂಕಿತರನ್ನು ಚಿಕ್ಕೋಡಿ ಬಳಿಯ ಮಜಲಟ್ಟಿ ಸರ್ಕಾರಿ ಕಾಲೇಜಿನಲ್ಲಿ ಕ್ವಾರಂಟೈನ್ ಮಾಡಲು ವಿರೋಧ ವ್ಯಕ್ತವಾಗಿದೆ. ಚಿಕ್ಕೋಡಿ ಪಟ್ಟಣದಲ್ಲಿರುವ ಲಾಡ್ಜ್ , ಹೊಟೇಲ್ ಹಾಗೂ ವಸತಿ ಶಾಲೆಗಳಲ್ಲಿ ಮೊದಲು ಕ್ವಾರಂಟೈನ ಮಾಡಿ. ಅಲ್ಲಿ ತುಂಬಿದ ನಂತರ ಮಜಲಟ್ಟಿಗೆ ಬನ್ನಿ ಎಂದು ಗ್ರಾಮಸ್ಥರ ಪಟ್ಟು ಹಿಡಿದಿದ್ದಾರೆ. ಹಳ್ಳಿ ಜನರಿಗೆ ಉಚಿವಾಗಿ ಕೊರೋನಾ ಬಳುವಳಿಯಾಗಿ ನೀಡಬೇಡಿ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.