ಆಸ್ತಿ ಕೇಳಿದ ಮಗಳು-ಅಳಿಯನನ್ನೇ ಬಡಿದ ತಂದೆ-ಚಿಕ್ಕಪ್ಪ: ಆಸ್ಪತ್ರೆಗೆ ದಾಖಲಾದ ಕರುಳು ಬಳ್ಳಿ

ತುಮಕೂರು: ಆಸ್ತಿಯನ್ನ ಕೇಳಲು ಬಂದಿದ್ದ ಮಗಳ ಹಾಗೂ ಅಳಿಯನ ಮೇಲೆ ಮಾರಣಾಂತಿಕವಾಗಿ ತಂದೆ-ಸಂಬಂಧಿಕರು ಹಲ್ಲೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ಗೋಪಾಲಪುರ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.
ಮಗಳು ಅಮೃತ ಹಾಗೂ ಅಳಿಯ ಸುನೀಲ್ ಮೇಲೆ ಹಲ್ಲೆ ನಡೆದಿದೆ ಎಂಬ ಆರೋಪ ಕೇಳಿ ಬಂದಿದ್ದು, ತಂದೆ ಬೈರಪ್ಪನಿಗೆ ಆಸ್ತಿ ವಿಚಾರದ ಬಗ್ಗೆ ಕೇಳಿದ್ದಕ್ಕೆ ಹಲ್ಲೆ ಮಾಡಲಾಗಿದೆ. ಇದಕ್ಕೆ ಬೈರಪ್ಪನ ಸಹೋದರರು ಸಾಥ್ ನೀಡಿದ್ದಾರೆನ್ನಲಾಗಿದೆ. ಅಮೃತಾ ತಲೆಗೆ ಹಾಗೂ ಬೆನ್ನಿಗೆ ಗಂಭೀರ ಗಾಯವಾಗಿದ್ದು, ತಿಪಟೂರು ಸಾರ್ವಜನಿಕ ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಚಿಕ್ಕವಯಸ್ಸಿನಿಂದ ಹಾಸ್ಟೆಲ್ ನಲ್ಲಿ ಬೆಳೆದಿದ್ದ ಅಮೃತ. ತಂದೆ ನಡವಳಿಕೆ ಸರಿಯಿಲ್ಲ, ಮಕ್ಕಳನ್ನ ಸಾಕದೇ ಹೊರಹಾಕಿದ್ದ ಎಂದು ಅಮೃತ ಆರೋಪ ಮಾಡಲಾಗಿದೆ. ಲಾಕ್ ಡೌನ್ ನಿಂದ ಊರಿಗೆ ಬಂದಿದ್ದ ಮಗಳು, ಅಳಿಯ.
ಈವರೆಗೂ ಸ್ಪಂದಿಸದ ಪೊಲೀಸರು. ಘಟನೆ ತಿಳಿಸಿದರೂ ಸ್ಥಳಕ್ಕೆ ಭೇಟಿ ನೀಡದ ಪೊಲೀಸರು. ನೊಣವಿನಕೆರೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ.