ಪಿಎಸೈ ಮಹದೇವ ಯಲಿಗಾರ ಮತ್ತೆ ಸಸ್ಪೆಂಡ್: ಕೊರೋನಾದಲ್ಲೂ ಪೊಲೀಸ್ ರಾಜಕೀಯ

ವಿಜಯಪುರ: ಭೀಮಾ ತೀರದ ಸಿಂಗಂ ಖ್ಯಾತಿಯ ಪಿಎಸೈ ಮಹದೇವ ಯಲಿಗಾರ ಅಮಾನತ್ತುಗೊಂಡಿದ್ದಾರೆ. ಕೊರೋನಾ ವೈರಸ್ ಲಾಕ್ ಡೌನ್ ಉಲ್ಲಂಘಿಸಿ ಸಾಮಾಜಿಕ ಅಂತರ್ ಕಾಯ್ದಕೊಳ್ಳದೇ ಕಾರ್ಯಕ್ರಮದಲ್ಲಿ ಭಾಗಿಯಾದ ಹಿನ್ನೆಲೆಯಲ್ಲಿ ಈ ಆದೇಶ ಮಾಡಲಾಗಿದೆ.
ಕೊರೋನಾ ಭೀತಿಯಲ್ಲೂ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸನ್ಮಾನ ಮಾಡಿಸಿಕೊಂಡಿದ್ದ ಚಡಚಣ ಪೊಲೀಸ್ ಠಾಣೆ ಪಿಎಸೈ ಮಹಾದೇವ ಯಲಿಗಾರ ಅಮಾನತ್ತು. ಚಡಚಣ ಠಾಣೆಯಿಂದ ವಿಜಯಪುರ ಜಿಲ್ಲಾ ಕಚೇರಿಗೆ ವರ್ಗಾವಣೆ ಮಾಡಲಾಗಿತ್ತು. ವರ್ಗಾವಣೆಯಾದ ಮೇಲೆ ಕೆಲಸಕ್ಕೆ ಹಾಜರಾಗದೆ ಗೈರಾಗಿದ್ದ ಪಿಎಸ್ಐ ಮಹಾದೇವ ಯಲಿಗಾರರನ್ನ ವಿಜಯಪುರ ಎಸ್ಪಿ ಅನುಪಮ್ ಅಗರವಾಲ್ ಅಮಾನತ್ತು ಆದೇಶ ಹೊರಡಿಸಿದ್ದಾರೆ.